ಉದ್ಯಮಿ ಸಿ.ಜೆ ರಾಯ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ನೋವಾಯಿತು. ಎರಡು ಬಾರಿ ನನಗೆ ಅವರು ಹಣ ನೀಡಿದ್ದರು. ನಿಮ್ಮೂರಿಗೆ ಬರುತ್ತೇನೆ ಅಂತ ಹೇಳಿದ್ದರು. ಮನೆ ಗೃಹ ಪ್ರವೇಶಕ್ಕೆ ಬರ್ತೀನಿ. ಕರಿ ಅಂತ ಹೇಳಿದ್ದರು. ಸಂಗೀತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂಬುದಾಗಿ ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ ದುಃಖ ತೋಡಿಕೊಂಡರು.
ಕೋವಿಡ್ ಸಮಯದಲ್ಲಿ ಬಾರಿ ಸಮಸ್ಯೆ ಉಂಟಾಗಿತ್ತು. ಪ್ಲಾಟ್ ತೆಗೆದುಕೊಳ್ಳುತ್ತೀಯೋ ಅಥವಾ ಹಣ ಬೇಕೋ ಅಂತ ಕೇಳಿದ್ರು. 9 ಲಕ್ಷ ರೂಪಾಯಿ ತೆರಿಗೆ ಕಡಿತಗೊಳಿಸಿ. 21 ಲಕ್ಷ ರೂಪಾಯಿಯನ್ನು ಉದ್ಯಮಿ ಸಿ.ಜೆ ರಾಯ್ ನೀಡಿದ್ದರು. ಅವರ ಸಾವನ್ನು ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂಬುದಾಗಿ ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ ಕಣ್ಣೀರಾಕಿದರು.
ನಾನು ನಿಮ್ಮೂರಿಗೆ ಬರುತ್ತೇನೆ ಅಂದಿದ್ದರು. ಮನೆ ಗೃಹ ಪ್ರವೇಶಕ್ಕೆ ಬರುವುದಾಗಿ ಹೇಳಿದ್ದರು. ಊರಿಗೆ ಬಂದಾಗ ಏನು ಮಾಡ್ತೀಯ ಅಂದಿದ್ದರು. ಕುರಿ ಕೊಯ್ಯುತ್ತೇನೆ ಅಂದಿದ್ದೆ. ನನಗೂ ಕುರಿ ಕೊಡು ಸಾಕುತ್ತೇನೆ ಅಂದಿದ್ದರು. ಆಯ್ತು ಕೊಡುತ್ತೇನೆ ಅಂತ ಹೇಳಿದ್ದೆ ಎಂದರು.








