ಶಿವಮೊಗ್ಗ: ಫೆ.3ರಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಆರಂಭಗೊಳ್ಳಲಿದೆ. ಈ ಜಾತ್ರೆಗೆ ಅಮ್ಯೂಸ್ಮೆಂಟ್ ಪಾರ್ಕ್ ಅತ್ಯಂತ ಆಕರ್ಷಣೆಯಲ್ಲಿ ಒಂದು. ಇದರ ಟಿಕೆಟ್ ದರವನ್ನು ಟೆಂಡರ್ ಹಿಡಿದವರು, ಉದ್ಯಮಿ ಲಿಂಗರಾಜು ರಿವೀಲ್ ಮಾಡಿದ್ದಾರೆ. ಹಾಗಾದರೆ ಎಷ್ಟು ಟಿಕೆಟ್ ದರ ಅನ್ನೋ ಬಗ್ಗೆ ಮುಂದೆ ಓದಿ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಟೆಂಡರ್ ದಾರ, ಉದ್ಯಮಿ ಡಿ.ಹೆಚ್.ಲಿಂಗರಾಜು ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತ ಅಮ್ಯೂಸ್ಮೆಂಟ್ ಪಾರ್ಕ್ ಟೆಂಡರ್ 1.34 ಕೋಟಿಗೆ ಹಿಡಿಯಲಾಗಿರುವುದೇ ಬಹು ಚರ್ಚೆಯಾಗುತ್ತಿದೆ. ಕಾರಣ ಅಷ್ಟೇ ದುಬಾರಿಯಾದ ದರವನ್ನು ಅಮ್ಯೂಸ್ಮೆಂಟ್ ಪಾರ್ಕ್ ಟಿಕೆಟ್ ದರ ನಿಗದಿ ಪಡಿಸಲಾಗುತ್ತದೆ ಅಂತ. ಆದರೇ ನಾವು ಜನಸಾಮಾನ್ಯರ ಪರವಾಗಿದ್ದೇವೆ. ಯಾವುದೇ ಕಾರಣಕ್ಕೂ ದುಬಾರಿ ದರ ನಿಗದಿ ಮಾಡೋದಿಲ್ಲ ಎಂದರು.
ಸಾಮಾನ್ಯರಿಗೆ ಕೈಗೆಟುಕುವ ರೀತಿಯ ದರ ಎನ್ನುವಂತೆ ಕಳೆದ ಬಾರಿಗಿಂತ ಸ್ವಲ್ಪವೇ ಹೆಚ್ಚಿಗೆ ಮಾಡಲಾಗಿದೆ. ದೊಡ್ಡವರಿಗೆ ರೂ.100, ಮಕ್ಕಳಿಗೆ ರೂ.80 ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಇದಲ್ಲದೇ ಹೊಸದಾಗಿ ನಾಲ್ಕು ಆಟದ ವಸ್ತುಗಳನ್ನು ತೋರಿಸಲಾಗಿದೆ. ಅವುಗಳಿಗೆ ಮಾತ್ರವೇ ರೂ.150 ಟಿಕೆಟ್ ದರ ನಿಗದಿ ಪಡಿಸಲಾಗಿದೆ ಎಂಬುದಾಗಿ ತಿಳಿಸಿದರು.
ಫೆಬ್ರವರಿ.3ರಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟನೆ ಮಾಡಲಿದ್ದಾರೆ. ಆ ಬಳಿಕ ಸಾರ್ವಜನಿಕರು ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಆಟದ ಮನರಂಜನೆಯನ್ನು ಪಡೆಯಬಹುದಾಗಿದೆ ಎಂದರು.
ವಕೀಲ ಗೌತಮ್ ಮಾತನಾಡಿ, ಈಗಾಗಲೇ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಬರದಿಂದ ಸಾಗಿದೆ. ಫೆ.3ರಿಂದ ಸಾರ್ವಜನಿಕರ ಮನರಂಜನೆಗೆ ತೆರೆದುಕೊಳ್ಳಲಿದೆ. ಈ ಬಾರಿ 30 ಥರದ ಆಟಗಳು ಇರಲಿವೆ. 2 ಜಾಯಿಂಟ್ ವೀಲ್, 2 ಕೋಲಂಬಸ್, 2 ರೈಲು ಸೇರಿದಂತೆ ಇತರೆ ಆಟದ ವಸ್ತುಗಳು ಇರಲಿವೆ ಎಂದರು.
ಸಾಗರದ ಮಾರಿಕಾಂಬ ಜಾತ್ರೆಗೆ ಮೊದಲ ಬಾರಿಗೆ ಹೊಸದಾಗಿ ಟವರ್, ರೇಂಜರ್, ಡಬ್ಬಲ್ ಡಿಸ್ಕ್, ಸುನಾಮಿ ಆಟದ ವಸ್ತುಗಳನ್ನು ಹಾಕಲಾಗಿದೆ. ಅವುಗಳಿಗೆ ಮಾತ್ರ ಹೆಚ್ಚಿನ ದರ ನಿಗದಿ ಪಡಿಸಲಾಗಿದೆ. ಸಾಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು








