ವಿಜಯನಗರ:ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆಸಿದ್ದು, ಪಾಪಿ ಪುತ್ರನೊಬ್ಬ ತನ್ನ ಅಪ್ಪ, ಅಮ್ಮ, ತಂಗಿಯನ್ನು ಕೊಂದು ಶವಗಳನ್ನು ಮನೆಯಲ್ಲೇ ಹೂತು ಹಾಕಿದ್ದಾನೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಜನವರಿ 27 ರಂದು ಭೀಕರ ಕುಟುಂಬ ಕೊಲೆ ನಡೆದಿದೆ. ಅರೋಪಿ ಅಕ್ಷಯ್ ಕುಮಾರ್ ತಮ್ಮ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತಾಕಿದ್ದಾನೆ.
ಸ್ಥಳಕ್ಕೆ ಶೀಘ್ರವೇ ಕೊಟ್ಟೂರು ಠಾಣೆಯ ಪೊಲೀಸರು ಭೇಟಿ ನೀಡಿ ಅರೋಪಿಯನ್ನು ಕರೆತರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮನೆ ಪರಿಶೀಲನೆ ನಡೆಸಿ, ಸ್ಥಳವನ್ನು ಸೀಲ್ ಮಾಡಿ ಕಾರ್ಯಚರಣೆ ನಡೆಸಲಾಗುವುದು ಎಂದು ವರದಿ ತಿಳಿಸಿದೆ.
ಆರೋಪಿ ಅಕ್ಷಯ್ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಗೆ ಹೋಗಿ ತನ್ನ ಕುಟುಂಬ ಕಾಣೆಯಾಗಿದೆ ಎಂದು ಮಿಸ್ಸಿಂಗ್ ದೂರು ನೀಡಲು ಯತ್ನಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.ವಿಚಾರಣೆ ವೇಳೆ, ಕೊಲೆ ಮಾಡುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ಅರ್ಹ ಕ್ರಮ ಕೈಗೊಂಡು, ಶವಗಳ ಪತ್ತೆ, ಮನೆ ಪರಿಶೀಲನೆ ಮತ್ತು ಆರೋಪಿಯ ಬಂಧನದ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.








