ಬೆಂಗಳೂರು : ಶೆಡ್ ನಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರುಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮುತ್ಸಂದ್ರ ಗ್ರಾಮದಲ್ಇ ಲೇಬರ್ ಶೆಡ್ ನಲ್ಲಿ ಮಲಗಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಕಾರ್ಮಿಕರಾದ ಜಯಂತ್ ಸಿಂಧೆ (25), ನಿರೇಂದ್ರನಾಥ್ (24), ಡಾಕ್ಟರ್ ಟೈಡ್ (25), ಧನಂಜಯರ್ ಟೈಡ್ (20) ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಕೋಕಾಕೋಲಾ ವೇರ್ ಹೌಸ್ ನಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾತ್ರಿ ಶೆಡ್ ಕಿಟಿಕಿ ಬಾಗಿಲು ಕ್ಲೋಸ್ ಮಾಡಿ ಅಡುಗೆ ಮಾಡಿದ್ದರು. ತಡರಾತ್ರಿ ಉಸಿರುಗಟ್ಟಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








