ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ನಂತ್ರ, ಸರ್ಕಾರ ಸಂರಕ್ಷಿತ ಸ್ಥಳವೆಂದು ಘೋಷಿಸಿ ಉತ್ಖನನಕ್ಕೆ ಸೂಚಿಸಿತ್ತು. ಅದರಂತೆ ಉತ್ಖನನ ಕಾರ್ಯ ಕೂಡ ನಡೆಯುತ್ತಿದೆ. ಈ ಲಕ್ಕುಂಡಿಯ ಉತ್ಖನನಕ್ಕೆ ನಿರ್ದೇಶಕರಾಗಿ ಟಿ.ಎಂ ಕೇಶವ್ ಅವರನ್ನು ನೇಮಿಸಲಾಗಿತ್ತು. ಇಂತಹ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಂತ ಡಾ.ಟಿ.ಎಂ ಕೇಶವ್(77) ಅವರನ್ನು ಲಕ್ಕುಂಡಿ ಉತ್ಖನನ ಕಾರ್ಯದ ನಿರ್ದೇಶಕನ್ನಾಗಿ ನೇಮಿಸಲಾಗಿತ್ತು. ಆದರೇ ಅನಾರೋಗ್ಯದಿಂದ ಬಳಲುತ್ತಿದ್ದಂತ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷರಾಗಿ ನಿವೃತ್ತರಾದ ಬಳಿಕ, ಲಕ್ಕುಂಡಿಯ ಉತ್ಕನನ ಕಾರ್ಯಕ್ಕೆ ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿತ್ತು. ಆದರೇ ಅವರು ಇಂದಿನ ನಿಧನರಾಗಿದ್ದು, ಲಕ್ಕುಂಡಿ ಉತ್ಕನನಕ್ಕೆ ಹಿನ್ನಡೆಯೇ ಆದಂತೆ ಆಗಿದೆ.
BREAKING: ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿಎಂ ಸಿದ್ಧರಾಮಯ್ಯ ಸಿದ್ಧತೆ: ಫೆ.5ರಂದು ಪೂರ್ವಭಾವಿ ಸಭೆ ನಿಗದಿ
ಎದೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ: ಬೆಂಗಳೂರು ನಗರ ಪೊಲೀಸ್ ಆಯುಕ್ತರು








