ಬೆಂಗಳೂರು: ಉದ್ಯಮಿ ಸಿ.ಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಸಿಜೆ ರಾಯ್ ಜೊತೆಗೆ ನಾನು ನಿತ್ಯ ಮಾತನಾಡುತ್ತಿದ್ದೆನು. ಅವರು ಈ ರೀತಿ ಮಾಡ್ತಾರೆ ಅಂತ ನಂಬೋಕೆ ಆಗ್ತಿಲ್ಲ. ಉದ್ಯಮಿ ಸಿ.ಜೆ ರಾಯ್ ಹಾಗೂ ನನ್ನ ನಡುವೆ ಅಪ್ಪ-ಮಕ್ಕಳ ಸಂಬಂಧವಿತ್ತು. ಅವರು ನನಗೆ ಅಪ್ಪನಂತಿದ್ದರು ಎಂಬುದಾಗಿ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ.
ಇಂದು ಅವರ ಆತ್ಮಹತ್ಯೆ ಕುರಿತು ಮಾತನಾಡಿದಂತ ಅವರು, ನಾಳೆ ಬೆಂಗಳೂರಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ಸ್ ಜಾಗದಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ಪತ್ನಿ ಹಾಗೂ ಮಕ್ಕಳಿಗೆ ವಿಷಯ ತಿಳಿಸಲಾಗಿದೆ ಎಂದರು.
ಇಂದು ರಾತ್ರಿ ಕುಟುಂಬದವರು ದುಬೈನಿಂದ ಬರಲಿದ್ದಾರೆ. ನಮ್ಮಿಬ್ಬರದ್ದು ಅಪ್ಪ-ಮಗನ ಸಂಬಂಧವಾಗಿತ್ತು. ಅವರು ಹೀಗೆ ಮಾಡಿಕೊಳ್ಳುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.
ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಕೇಸ್: ಉನ್ನತ ಮಟ್ಟದ ತನಿಖೆ- ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ








