ಬೆಂಗಳೂರು: ರಾಜ್ಯ ಸರ್ಕಾರದಿಂದ ಕೆಪಿಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಂತ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಆದೇಶಿದೆ.
ಸಿಎಂ ಸೂಚನೆ ಮೇರೆಗೆ ಪಂಕಜ್ ಕುಮಾರ್ ಪಾಂಡೆಗೆ ನೋಟಿಸ್ ನೀಡಲಾಗಿದ್ದು, ಉಕ್ಷಣವೇ ತಮ್ಮ ಮೇಲಿನ ಗಂಭೀರ ಕರ್ತವ್ಯ ಲೋಪ, ಶಿಸ್ತು ಕ್ರಮದ ಉಲ್ಲಂಘನೆಯ ಬಗ್ಗೆ ಉತ್ತರ ನೀಡುವಂತೆ ಸಿಎಸ್ ಶಾಲಿನಿ ರಜನೀಶ್ ಸೂಚಿಸಿದ್ದರು.
ಜನವರಿ.20ರಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಗೆ ಸೂಚಿಸಲಾಗಿತ್ತು. ಆದರೇ ಪಂಕಜ್ ಕುಮಾರ್ ಪಾಂಡೆ ಅವರು ಸರಿಯಾದ ಸಮಯಕ್ಕೆ ಸಿಎಂ ಭೇಟಿಯಾಗದೇ ಕಡೆಗಣಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದಂತ ಸಿಎಂ ಸಿದ್ಧರಾಮಯ್ಯ ಕೆಂಡಾಮಂಡಲರಾಗಿದ್ದರು.
ಮುಖ್ಯಮಂತ್ರಿ ಕರೆ ಮೇರೆಗೆ ಹಾಜರಾಗದೇ ಕರ್ತವ್ಯಲೋಪ ಎಸಗಿದ್ದಂತ ಆರೋಪ ಪಂಕಜ್ ಕುಮಾರ್ ಪಾಂಡೆ ಮೇಲಿತ್ತು. ಗಂಭೀರ ಕರ್ತವ್ಯ ಲೋಪ, ಶಿಸ್ತು ನಿಯಮಗಳ ಉಲ್ಲಂಘನೆಯ ಹಿನ್ನಲೆಯಲ್ಲಿ ಸಿಎಂ ಶಾಲಿನಿ ರಜನೀಶ್ ಅವರು ಪಂಕಜ್ ಕುಮಾರ್ ಪಾಂಡೆಗೆ ಲಿಖಿತ ನೋಟಿಸ್ ನೀಡಿದ್ದಾರೆ. ತಕ್ಷಣವೇ ಉತ್ತರಿಸುವಂತೆಯೂ ಖಡಕ್ ವಾರ್ನಿಂಗ್ ಮಾಡಿದ್ದರು.
ಇದಾದ ಬೆನ್ನಲ್ಲೇ ಕರ್ನಾಟಕ ಪವರ್ ಕಾರ್ಪೊರೇಷನ್ (KPCL) ಎಂ.ಡಿ ಹುದ್ದೆಯಿಂದ ಪಂಕಜ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಇಂದು ಸರ್ಕಾರ ಆದೇಶ ಮಾಡಿದೆ. ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಇನ್ನೂ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆಯಿಂದ ತೆರವಾದಂತ ಕೆಪಿಸಿಎಲ್ ಎಂ.ಡಿ ಹುದ್ದೆಗೆ 2010ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಡಾ.ರಾಮ್ ಪ್ರಶಾಂತ್ ಮನೋಹರ್.ವಿ ಅವರನ್ನು ನೇಮಕ ಮಾಡಲಾಗಿದೆ.

ಕ್ಯಾನ್ಸರ್ ಆರಂಭಿಕ ಲಕ್ಷಣಗಳೇನು? ಇಲ್ಲಿದೆ ಮಾಹಿತಿ | Symptoms of Cancer
BREAKING: ರಂಜಾನ್ ಮಾಸದ ಹಿನ್ನಲೆ: ರಾಜ್ಯದ ಉರ್ದು ಪ್ರಾಥಮಿಕ, ಪ್ರೌಢ ಶಾಲೆಗಳ ಶಾಲಾ ಅವಧಿ ಬದಲಾವಣೆ








