ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2002ರ ಮತದಾರರ ಪಟ್ಟಿಯನ್ನು 2025ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತೀ ಮಹತ್ವದ್ದಾಗಿದೆ. ಈ ಬಗ್ಗೆ ಈ ಕೆಳಗಿನ ಅರ್ಹ ಮತದಾರರು ಕೂಡಲೇ ಗಮನ ಹರಿಸಿ
ನೀವು ಮಾಡಬೇಕಾದ ಅನಿವಾರ್ಯ ಕೆಲಸಗಳು:
2002ರ ನಂತರ ಮದುವೆಯಾಗಿ ಬಂದಿರುವವರು, ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ (ಸ್ಥಳಾಂತರ) ಗೊಂಡಿರುವವರು, ಅಥವಾ ಹೊಸದಾಗಿ ಅರ್ಹತೆ ಪಡೆದಿರುವವರು, ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ನೀವು ಈ ಹಿಂದೆ ವಾಸವಿದ್ದ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ. ಭಾಗ ಸಂಖ್ಯೆ (Part Number) ಹಾಗೂ ತಮ್ಮ ಕ್ರಮ ಸಂಖ್ಯೆ (Serial Number ಯನ್ನು ತಿಳಿದಿರಬೇಕು.
ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ನಿಮ್ಮ ತಂದೆ-ತಾಯಿಯವರ ಕ್ರಮ ಸಂಖ್ಯೆ ಅಥವಾ ಅಜ್ಜ-ಅಜ್ಜಿಯವರ ಕ್ರಮ ಸಂಖ್ಯೆಯೊಂದಿಗೆ (ಯಾವುದಾದರೂ ಸಂಬಂಧಿಸಿದ) ಮಾಹಿತಿಯನ್ನು ಒದಗಿಸಬೇಕು.
ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಿ:
ಈ ಎಲ್ಲ ಮಾಹಿತಿಯನ್ನು ನಿಮ್ಮ ಪ್ರದೇಶದ ಜವಾಬ್ದಾರಿಯುತ ಬಿ.ಎಲ್.ಓ. (Booth Level Officer) ರವರಿಗೆ ತಕ್ಷಣವೇ ಒಪ್ಪಿಸಿ, ಬಿ.ಎಲ್.ಪಿ. ಮುಖಾಂತರ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಕಡ್ಡಾಯವಾಗಿ ತಿಳಿಸಲಾಗಿದೆ.








