2025-26ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಲ್ಲಾ ವರ್ಗಗಳ ಆಸಕ್ತ ರೈತರಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ 5 ಎಕರೆವರೆಗಿನ ಪ್ರದೇಶಕ್ಕೆ ಶೇಕಡಾ 90% ರಷ್ಟು ಸಹಾಯಧನ ಹಾಗೂ ಮೇಲ್ಪಟ್ಟ ಪ್ರದೇಶಕ್ಕೆ ಶೇಕಡಾ 45% ರ ದರದಂತೆ ಸಹಾಯಧನವನ್ನು ಒಟ್ಟಾರೆ ಗರಿಷ್ಠ 12.50 ಎಕರೆ ಪ್ರದೇಶದವರೆಗೆ ನೀಡಲು ಅವಕಾಶವಿದ್ದು, ಈಗಾಗಲೇ 7 ವರ್ಷಗಳ ಹಿಂದೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯಧನ ಪಡೆದಿರುವ ರೈತರು ಅವುಗಳು ಹಾಳಾಗಿದ್ದಲ್ಲಿ ಪುನಃ ಸೂಕ್ಷ್ಮ ನೀರಾವರಿ ಅಳವಡಿಸಿಕೊಂಡಲ್ಲಿ ಅವರೂ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಸಹಾಯಧನವನ್ನು ಯೋಜನೆಯ ಮಾರ್ಗಸೂಚಿ ಹಾಗೂ ಅನುದಾನ ಲಭ್ಯತೆ ಮತ್ತು ಜೇಷ್ಠತೆಯ ಅನುಸಾರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ/ತಾಲೂಕು ಮಟ್ಟದ ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸುವAತೆ ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








