ಬೆಂಗಳೂರು : ರಾಜ್ಯದ ಇತಿಹಾಸದಲ್ಲಿ ಯಾರೂ ಮಾಡದ ಸಾಹಸಕ್ಕೆ ಸಚಿವ ಕೃಷ್ಣ ಬೈರೇಗೌಡರು ಕೈಹಾಕಿದ್ದು, ಈ ವರ್ಷ ಇನ್ನೂ 1.11 ಲಕ್ಷ ಬಡವರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಲಾಗದೆ.
ಅಧಿಕಾರಕ್ಕೆ ಏರುತ್ತಿದ್ದಂತೆ ಮನೆ, ಜಮೀನು ಇಲ್ಲದ ಲಕ್ಷಾಂತರ ಬಡವರಿಗೆ ಹಕ್ಕುಪತ್ರ ನೀಡುವ ಸಂಕಲ್ಪ ಹೊಂದಿರುವ ಸಚಿವರು, ಕಳೆದ ಎರಡೂವರೆ ವರ್ಷದಿಂದ ರಾಜ್ಯಾದ್ಯಂತ ಓಡಾಡಿ ಅಧಿಕಾರಿಗಳ ಬೆನ್ನುಬಿದ್ದು ಅರ್ಹ ಫಲಾನುಭವಿಗಳನ್ನು ಗುರುತಿಸಲು ಸೂಚನೆ ನೀಡಿದ್ದಾರೆ.
ಕಳೆದ ವರ್ಷ ವಿಜಯನಗರದಲ್ಲಿ ಐತಿಹಾಸಿಕ ಕಾರ್ಯಕ್ರಮ ಜರುಗಿಸಿ 1.11 ಲಕ್ಷ ಬಡವರಿಗೆ ಹಕ್ಕುಪತ್ರ ನೀಡಿದ್ದು,ಈ ವರ್ಷ ಇನ್ನೂ 1.11 ಲಕ್ಷ ಬಡವರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಲಾಗಿದೆ. ಫೆಬ್ರವರಿ.13 ರಂದು ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ದಶಕಗಳ ಕಾಲ ಮನೆ-ಜಮೀನು ಇಲ್ಲದವರಿಗೆ ಬಡವರಿಗೆ ವರದಾನವಾದ ಸಚಿವ ಕೃಷ್ಣ ಬೈರೇಗೌಡರ ನಿರ್ಧಾರ.
ರಾಜ್ಯದಲ್ಲಿರುವ ಹಾಡಿ, ಹಟ್ಟಿ, ತಾಂಡಾ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಇಂಥ ವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ನೀಡಿ ಫಲಾನುಭವಿ ಗಳಿಗೆ ಹಕ್ಕುಪತ್ರ ನೀಡಲು 2017ರಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಇದರಡಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಿ ಎಂದರು.








