ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ಹಗರಣದಲ್ಲಿ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದಂತ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿ ವಿರುದ್ಧದ ಆನ್ ಲೈನ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮಹತ್ವದ ಕ್ರಮ ವಹಿಸಿದೆ. ಮತ್ತೆ 177.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟಿಗೋಲನ್ನು ಜಾರಿ ನಿರ್ದೇಶನಾಲಯವು ಹಾಕಿಕೊಂಡಿದೆ.
ಕೃಷಿ ಜಮೀನು, ನಿವೇಶನ ಸೇರಿದಂತೆ ಅನೇಕ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣದಿಂದ ಸಂಪಾದನೆ ಮಾಡಿದ ಆಸ್ತಿ ಎಂದು ಜಪ್ತಿ ಮಾಡಿರುವುದಾಗಿ ಇಡಿ ತಿಳಿಸಿದೆ. ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಆನ್ ಲೈನ್ ಬೆಟ್ಟಿಂಗ್ ಕೇಸ್ ಗಳು ಇವಾಗಿವೆ.
ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸಿದ್ದ ಇಡಿ ಆಧಿಕಾರಿಗಳು. ತನಿಖೆ ವೇಳೆ ವೀರೇಂದ್ರ, ಸಹಚರರು ಮಾಸ್ಟರ್ ಮೈಂಡ್ ಆಗಿದ್ದು ಎನ್ನಲಾಗಿದೆ. ವೀರೇಂದ್ರ ಪಪ್ಪಿ, ಸಹಚರರು ಮಾಸ್ಟರ್ ಮೈಂಡ್ ಎಂದು ಪತ್ತೆ.
ED, Bengaluru Zonal Office has provisionally attached assets worth Rs. 177.3 Crore (approx.) on 29.01.2026 under PMLA, 2002 in the case relating to illegal online betting and gambling activities involving KC Veerendra and his associates. The attached properties include immovable… pic.twitter.com/DTLdfRio8l
— ED (@dir_ed) January 29, 2026








