ಬೆಂಗಳೂರು: ಸಚಿವ ಸ್ಥಾನಕ್ಕೆ ಕೆ.ಜೆ ಜಾರ್ಜ್ ರಾಜೀನಾಮೆ ನೀಡಿಲ್ಲ. ರಾಜೀನಾಮೆ ವಿಚಾರಕ್ಕೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ಎಂಬುದು ಸುಳ್ಳು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲೇ ಸ್ಪಷ್ಟ ಪಡಿಸಿದ್ದಾರೆ.
ಇಂದು ವಿಧಾನಸಭೆ ಕಲಾಪದಲ್ಲಿ ಸಚಿವ ಸ್ಥಾನಕ್ಕೆ ಕೆ.ಜೆ ಜಾರ್ಜ್ ರಾಜೀನಾಮೆ ವಿಚಾರವಾಗಿ ಪ್ರಸ್ತಾಪಿಸಿ ಮಾತನಾಡಿದಂತ ಅವರು ಈ ಹೇಳಿಕೆಯನ್ನು ನೀಡಿದರು.
BREAKING: ನಾನು ರಾಜೀನಾಮೆ ಬಗ್ಗೆ ಮಾತನ್ನೇ ಆಡಿಲ್ಲ: ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ
ಬೆಂಗಳೂರು: ನಾನು ಅಸಮಾಧಾನ ಹೊರಹಾಕಿ, ರಾಜೀನಾಮೆಯ ಮಾತನಾಡಿದ್ದೇನೆ ಎಂಬುದು ಸುಳ್ಳು. ಇದು ಮಾಧ್ಯಮಗಳ ಸೃಷ್ಠಿಯಾಗಿದೆ. ನಾನು ಎಲ್ಲಿಯೂ ರಾಜೀನಾಮೆ ಮಾತನ್ನೇ ಆಡಿಲ್ಲ ಎಂಬುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ.
ಇಂದು ವಿಧಾನಸಭೆಯಲ್ಲೇ ಸದನಕ್ಕೆ ಉತ್ತರಿಸಿದಂತ ಅವರು, ನನ್ನ ಸಹಕಾರ, ಸಹಮತ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಯಾವತ್ತೂ ಇದ್ದೇ ಇರುತ್ತದೆ. ಅದರಲ್ಲಿ ಎರಡು ಮಾತೇ ಇಲ್ಲ. ಇಂದು, ಮುಂದು, ಎಂದೆಂದಿಗೂ ಇರಲಿದೆ ಎಂಬುದಾಗಿ ತಿಳಿಸಿದರು.
ಈ ಮೊದಲು ಬೆಳಗ್ಗೆ ಒಂದು, ಮಧ್ಯಾಹ್ನ, ರಾತ್ರಿಯೊಂದು ನ್ಯೂಸ್ ಬರ್ತಾ ಇತ್ತು. ಈಗ ಕ್ಷಣ ಕ್ಷಣದ ನ್ಯೂಸ್ ಕೊಡೋದೇ ಆಗಿದೆ. ಅವರಿಗೆ ಬ್ರೇಕಿಂಗ್ ಬೇಕು. ಹಾಗಂತ ನಾನು ಅವರನ್ನು ದೂರುತ್ತಿಲ್ಲ. ಯಾವುದೇ ಮಾಧ್ಯಮಗಳಿಗೆ ನಾನು ರಾಜೀನಾಮೆ ಬಗ್ಗೆ ಹೇಳಿಕೆ ನೀಡಿಲ್ಲ. ಎಲ್ಲಿಯೂ ಪ್ರಸ್ತಾಪಿಸಿಯೂ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಠಿಯಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.








