ಶಿವಮೊಗ್ಗ: ಫೆಬ್ರವರಿ 3 ರಿಂದ 11ರವರೆಗೆ ಒಂಬತ್ತು ದಿನಗಳ ಕಾಲ ಇತಿಹಾಸ ಪ್ರಸಿದ್ಧ ಸಾಗರ ಶ್ರ್ರೀ ಮಾರಿಕಾಂಬ ಜಾತ್ರೆಯು ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಕುಸ್ತಿ ಪಂದ್ಯಾವಳಿಗೆ ಅಂಕಣ ಸಿದ್ಧತೆಗೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ್ ರಾವ್, ಕುಸ್ತಿ ಸಮಿತಿಯ ಸಂಚಾಲಕ ಅಶೋಕ, ಸಹ ಸಂಚಾಲಕ ಶಶಿಕಾಂತ್ ಎಂ.ಎಸ್ ಚಾಲನೆ ನೀಡಿದರು.
ಇಂದು ಸಾಗರದ ನೆಹರು ಮೈದಾನದಲ್ಲಿ ಫೆಬ್ರವರಿ 6ರಿಂದ 8ರವರೆಗೆ ನಡೆಯಲಿರುವ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತದ ಹಿನ್ನಲೆಯಲ್ಲಿ ಕುಸ್ತಿ ಪಂದ್ಯಾವಳಿಯ ಪೂರ್ವ ಭಾವಿ ಅಂಕಣ ಸಿದ್ಧತೆಗೆ ಚಾಲನೆ ನೀಡಲಾಯಿತು.
ಈ ಬಳಿಕ ಮಾತನಾಡಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್ ನಾಗೇಂದ್ರ ಅವರು, ಫೆಬ್ರವರಿ 6ರಿಂದ ಮೂರು ದಿನಗಳ ಕಾಲ ಮಾರಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯ ಏರ್ಪಡಿಸಲಾಗಿದೆ. ತಾಯಿಯ ಆಶೀರ್ವಾದದಿಂದ ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂಬುದಾಗಿ ಆಶಿಸಿದರು.

ಪ್ರಧಾನ ಕಾರ್ಯದರ್ಶಿ ಗಿರಿಧರ್ ರಾವ್ ಮಾತನಾಡಿ ಮಾರಿ ಜಾತ್ರೆ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿ ಸಾಗರದ ನೆಹರು ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕುಸ್ತಿ ಪಂದ್ಯದ ಸಂಚಾಲಕ ಅಶೋಕ ಅವರು ಮೂರು ದಿನಗಳ ಕಾಲ ಕುಸ್ತಿ ಪಂದ್ಯ ಏರ್ಪಡಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಹ ಸಂಚಾಲಕ ಶಶಿಕಾಂತ್ ಎಂ.ಎಸ್ ಮಾತನಾಡಿ, ಸಾಗರದ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತ ನಡೆಯುವ ಕುಸ್ತಿ ಪಂದ್ಯಾವಳಿಗೆ ಫೆ.6ರಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಚಾಲನೆ ನೀಡಲಿದ್ದಾರೆ. ಕುಸ್ತಿ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸಂತೋಷ್ ಸದ್ಗುರು ಮಾತನಾಡಿ ಫೆ.6ರಿಂದ ಮೂರು ದಿನಗಳ ಕಾಲ ಕುಸ್ತಿ ಪಂದ್ಯಗಳು ನಡೆಯಲಿವೆ. ರಾಜ್ಯ, ಹೊರ ರಾಜ್ಯಗಳಿಂದ ಕುಸ್ತಿ ಪಟುಗಳು ಭಾಗಿಯಾಗಲಿದ್ದಾರೆ ಎಂದರು.
ಈ ವೇಳೆ ಪೋತರಾಜ ರವಿ, ಸುಂದರ್ ಸಿಂಗ್, ರವಿ ನಾಯ್ಡು, ಬಾಬಣ್ಣ, ರಾಘು, ರಮೇಶ್, ಪ್ರಕಾಶ್, ಗಣೇಶ್, ಸತೀಶ್, ಪ್ರೇಮ್, ರವಿ, ಧರ್ಮಪ್ಪ, ಬಸವರಾಜ್, ವೆಂಕಟೇಶ್, ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು.








