ಹಾವೇರಿ : ತಾಲೂಕಾಡಳಿತದ ಎಡವಟ್ಟನಿಂದ ಹೆಂಡತಿಯ ಮರಣ ಪತ್ರಕ್ಕೆ ಅರ್ಜಿ ಹಾಕಿದ ಗಂಡನಿಗೆ ಆತನ ಮರಣಪತ್ರ ಕೊಟ್ಟಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ಮಲ್ಲಮ್ಮ ಎಂಬ ಮಹಿಳೆ ಆ.12, 2021ರಂದು ಮರಣ ಹೊಂದಿದ್ದರು. ಪತ್ನಿ ಮರಣ ಪ್ರಮಾಣ ಪತ್ರಕ್ಕೆ ಆಕೆಯ ಗಂಡ ಟೋಪನಗೌಡ ಗುಬ್ಬಿ ಎಂಬುವರು ರಟ್ಟಿಹಳ್ಳಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಅಧಿಕಾರಿಗಳು ಪತ್ನಿ ಮರಣ ಪ್ರಮಾಣ ಪತ್ರದ ಬದಲು ಅರ್ಜಿದಾರನೇ ಮೃತಪಟ್ಟಿರುವುದಾಗಿ ಪ್ರಮಾಣ ಪತ್ರ ನೀಡಿದ್ದಾರೆ. ಕಳೆದ 5 ವರ್ಷಗಳಿಂದ ಟೋಪನಗೌಡ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. 5 ವರ್ಷಗಳ ಹಿಂದೆಯೇ ಮರು ಅರ್ಜಿ ಸಲ್ಲಿಸಿದರೂ ದಾಖಲಾತಿಯಲ್ಲಿ ಹೆಸರು ತೆಗೆಯದೇ ನಿರ್ಲಕ್ಷ್ಯ ವಹಿಸಿದ್ದಾರೆ.








