ಬೆಂಗಳೂರು: ಜಮೀನು ಖರೀದಿಸುವವರಿಗೆ ಇದೀಗ ಕಂದಾಯ ಇಲಾಖೆ ಸಿಹಿಸುದ್ದಿ ನೀಡಿದ್ದು, ನೀವು ಖರೀದಿಸುವ ಜಮೀನಿನ ಕುರಿತು ಮಾಹಿತಿ ನೀಡುವ ದಿಶಾಂಕ್’ ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದು, ಇದರ ಮೂಲಕ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಬಹುದು.
ಏನಿದು `ದಿಶಾಂಕ್’ ಆ್ಯಪ್? ಹೇಗೆ ಕೆಲಸ ಮಾಡುತ್ತೆ.?
ರಾಜ್ಯದ ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ನ ಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. ದಿಶಾಂಕ್ ಆ್ಯಪ್ ಬೆಂಗಳೂರು ಸೇರಿದಂತೆ ರಾಜ್ಯದ 30 ಜಿಲ್ಲೆಯಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.
ಯಾವ ಮಾಹಿತಿ ಸಿಗುತ್ತೆ?
ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ನಇಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.
ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್ ಹುಡುಕಲು ಹಾಗೂ ಆ ಭೂಮಿಯ ಬಗ್ಗೆ ವಿವರಗಳನ್ನು ಪಡೆಯಲು ದಿಶಾಂಕ್ ಆ್ಯಪ್ ಸಹಕಾರಿಯಾಗಲಿದೆ. ಭೂ ಭಾಗದ ವಿವರ, ರಾಜಕಾಲುವೆ, ಕೆರೆ ಕುಂಟೆ ಸುತ್ತಲಿನ ಪ್ರದೇಶ ಹಾಗೂ ಆಸ್ತಿಯ ಆಸುಪಾಸಿನಲ್ಲಿರುವ ಇತರೇ ಭೂ ಭಾಗದ ಮಾಹಿತಿಯನ್ನು ನೀಡಲಿದೆ.
ದಿಶಾಂಕ್’ ಆ್ಯಪ್ ಬಳಕೆ ಹೇಗೆ?
ಮೊಬೈಲ್ ಫೋನ್ಗ’ಳಲ್ಲಿ ಈ ಆ್ಯಪ್ ಡೌನ್ಲೋನಡ್ ಮಾಡಿ, ಲೊಕೇಷನ್ ವಿವರವನ್ನು ಅಪ್ ಡೇಟ್ ಮಾಡಿಕೊಳ್ಳಬೇಕು. ಈ ವೇಳೆ ವ್ಯಕ್ತಿ ಯಾವ ಪ್ರದೇಶದಲ್ಲಿ ಇರುತ್ತಾರೆ ಆ ಸ್ಥಳದ ಯಾವ ಸರ್ವೆ ನಂಬರ್ ನಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇದರೊಂದಿಗ ಯಾವುದೇ ಆಸ್ತಿಯ ಸರ್ವೆ ನಂಬರ್ ನಮೂದಿದರೆ ಆ ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು.
`ದಿಶಾಂಕ್’ ಆ್ಯಪ್ ಯಾರಿಗೆಲ್ಲಾ ಉಪಯೋಗವಾಗಲಿದೆ?
ರಾಜ್ಯದ ಎಲ್ಲಾ ಜನತೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಂತೆ ಎಲ್ಲರೂ ಭೂಮಿಯ ವಿವರ ಪಡೆಯಲು ಆ್ಯಪ್ ಉಪಯುಕ್ತವಾಗಿದೆ. ಆಸ್ತಿ ವ್ಯವಹಾರ, ಹೊಸ ಭೂಮಿ ಖರೀದಿ ಹಾಗೂ ಮಾರಾಟ ವೇಳೆ ಮಾಹಿತಿಗಾಗಿ ಆ್ಯಪ್ ಬಳಕೆ ಮಾಡಬಹುದು.
ಭೂಮಿಯ ಖಾತೆ ವಿವರದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದಾಗಿದೆ.
ಆ್ಯಪ್ ಇನ್ಸ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ https://play.google.com/store/apps/details?id=com.ksrsac.sslr&hl=en_IN ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅಥವಾ ನಿಮ್ಮ ಮೊಬೈಲ್ ನಲ್ಲಿರುವ Google play store ನಲ್ಲಿ Dishank Survey app ಎಂದು ಟೈಪ್ ಮಾಡಿ ದಿಶಾಂಕ್ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ.








