ಬೆಂಗಳೂರು : ಜೀವನದಲ್ಲಿ ಒತ್ತಡ ಸಾಮಾನ್ಯ. ಕೆಲಸದ ಒತ್ತಡ, ಸಂಸಾರದ ಒತ್ತಡ ಹೀಗೆ ನೆಮ್ಮದಿ ಕೆಡೆಸಿಕೊಳ್ಳಲು ಸಾಕಷ್ಟು ವಿಚಾರಗಳು ಇವೆ. ಆದ್ರೆ, ಹೆಚ್ಚಿನ ಒತ್ತಡವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಇಂತಹ ಸಮಸ್ಯೆಗಳಿಗೆ ಸಾವು ಕೂಡ ಪರಿಹಾರವಲ್ಲ.
ನಿಮಗೆ ಕಾಡುತ್ತಿರುವ ಒತ್ತಡದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಟೆಲಿ ಮನಸ್ ನಿಮ್ಮ ಜೊತೆಗಿದೆ. 14416ಕ್ಕೆ ಕರೆ ಮಾಡಿ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ಒತ್ತಡದಿಂದ ವಿಮುಕ್ತರಾಗಿ.
ಮಾನಸಿಕ ಕಾಯಿಲೆಗಳ ಕುರಿತು ಮಾಹಿತಿಗಳು
ದೆವ್ವ ಭೂತಗಳ ಚೇಷ್ಟೆಯಿಂದ, ಮಾಟ ಮಂತ್ರಗಳಿಂದ, ಪೂರ್ವಜನ್ಮದ ಪಾಪಗಳಿಂದ, ಮದ್ದು ಹಾಕುವುದರಿಂದ ಮಾನಸಿಕ ಕಾಯಿಲೆಗಳು ಬರುವುದಿಲ್ಲ. ಮಿದುಳಿನಲ್ಲಿ ಆಗುವ ಕೆಲವು ಬದಲಾವಣೆಗಳು, ಮಿದುಳಿನ ಕಾಯಿಲೆಗಳು, ವಾತಾವರಣದಲ್ಲಿ ಕಂಡು ಬರುವ ತೊಂದರೆಗಳು, ಕಷ್ಟನಷ್ಟಗಳು, ಮೇಲಿಂದ ಮೇಲೆ ಮನಸ್ಸಿಗೆ ಆಗುವ ನೋವು ನಿರಾಶೆಗಳು, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಇವುಗಳಿಂದ ಮಾನಸಿಕ ಕಾಯಿಲೆಗಳು ಬರುತ್ತವೆ.
ಮಾನಸಿಕ ಅಸ್ವಸ್ಥರು ತಮ್ಮ ಚಿಕಿತ್ಸೆಗಾಗಿ ಮುಂಚಿತ ನಿರ್ದೇಶನ ನೀಡಬಹುದು ಮತ್ತು ತಮ್ಮ ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡಬಹುದು (ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017).
ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017 ರ ಪ್ರಕಾರ ಮಾನಸಿಕ ಅಸ್ವಸ್ಥರ ಹಕ್ಕುಗಳು ಕುರಿತು ಮಾಹಿತಿಗಳು
“ಉತ್ತಮ ಗುಣಮಟ್ಟದ ಮಾನಸಿಕ ಚಿಕಿತ್ಸೆ ಪಡೆಯುವ ಹಕ್ಕು, ಸಮುದಾಯದಲ್ಲಿ ಜೀವಿಸುವ ಹಕ್ಕು, ಚಿಕಿತ್ಸಾ ಸಮಯದಲ್ಲಿ ಘನತೆಯುಳ್ಳ ಸಮಾನ ಚಿಕಿತ್ಸೆ ಪಡೆಯುವ ಹಕ್ಕು, ಅಂಬ್ಯುಲೆನ್ಸ್‌ಸೇವೆ ಪಡೆಯುವ ಹಕ್ಕು, ಆರೋಗ್ಯ ವಿಮೆ ಪಡೆಯುವ ಹಕ್ಕು ಹಾಗೂ ಸೇವೆಗಳಲ್ಲಿನ ಕೊರತೆಗಳ ಬಗ್ಗೆ ದೂರು ನೀಡುವ ಹಕ್ಕು
ಮಾನಸಿಕ ಆರೋಗ್ಯ ಆರೈಕೆಕಾಯಿದೆ 2017 ರ ಅನ್ವಯ ಮಾನಸಿಕ ಆರೋಗ್ಯ ಸಂಸ್ಥೆಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರು ಕಡ್ಡಾಯ ನೋಂದಣಿ ಮಾಡುವ ಬಗ್ಗೆ
ಸೆಕ್ಷನ್ 65 (1) ರ ಪ್ರಕಾರ “ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸದೇ ಯಾವುದೇ ವ್ಯಕ್ತಿಯೂ/ಸಂಸ್ಥೆಯೂ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಂತಿಲ್ಲ ಅಥವಾ ನಡೆಸುವಂತಿಲ್ಲ” ರಾಜ್ಯದ ಸರ್ಕಾರಿ ಮತ್ತು ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಗಳು /ದುಶ್ಚಟ ನಿವಾರಣಾ ಕೇಂದ್ರಗಳು/ ಪುನರ್ವಸತಿ ಕೇಂದ್ರಗಳು ಮತ್ತು ಮಾನಸಿಕ ಜಾಲತಾಣದ ಲಿಂಕ್ ಮೂಲಕ ಆರೋಗ್ಯ ವೃತ್ತಿಪರರು e-manas ನೋಂದಾಯಿಸುವುದು.
https://e-manas.karnataka.gov.in/mhms_mhd/#/
ಜೀವನದಲ್ಲಿ ಒತ್ತಡ ಸಾಮಾನ್ಯ. ಕೆಲಸದ ಒತ್ತಡ, ಸಂಸಾರದ ಒತ್ತಡ ಹೀಗೆ ನೆಮ್ಮದಿ ಕೆಡೆಸಿಕೊಳ್ಳಲು ಸಾಕಷ್ಟು ವಿಚಾರಗಳು ಇವೆ. ಆದ್ರೆ, ಹೆಚ್ಚಿನ ಒತ್ತಡವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಇಂತಹ ಸಮಸ್ಯೆಗಳಿಗೆ ಸಾವು ಕೂಡ ಪರಿಹಾರವಲ್ಲ.
ನಿಮಗೆ ಕಾಡುತ್ತಿರುವ ಒತ್ತಡದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಟೆಲಿ ಮನಸ್ ನಿಮ್ಮ ಜೊತೆಗಿದೆ.… pic.twitter.com/YG9lONJSGS
— DIPR Karnataka (@KarnatakaVarthe) January 27, 2026








