ಬೆಂಗಳೂರು : ಪ್ಯಾರಾ ಮೆಡಿಕಲ್ ಕೋರ್ಸ್ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್, ಇನ್ಮುಂದೆ ಪ್ಯಾರಾ ಮೆಡಿಕಲ್ ಗೆ ಪಿಯುಸಿ ವಿಜ್ಞಾನ ಕಡ್ಡಾಯವಾಗಿದೆ.
ಹೌದು, ಕೇಂದ್ರ ಸರ್ಕಾರದ ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಹೆಲ್ಕೇರ್ ಪ್ರೊಫೆಷನ್ಸ್ ಹೊರಡಿಸಿರುವ ನೂತನ ಸುತ್ತೋಲೆ ಪ್ಯಾರಾ ಮೆಡಿಕಲ್ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳಿಗೆ ಈವರೆಗೆ ಎಸ್ ಎಸ್ ಎಲ್ ಸಿ ನಂತರ ಅರೆ-ವೈದ್ಯಕೀಯ ತರಬೇತಿ ಪಡೆಯಲು ಅವಕಾಶವಿತ್ತು. ಆದರೆ ಇನ್ನು ಮುಂದೆ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದವರಿಗಷ್ಟೇ ಪ್ರವೇಶ ಎಂದು ನಿಯಮ ರೂಪಿಸಲಾಗಿದೆ.
ಕೇಂದ್ರ ಆಯೋಗವು ಜ.9ರಂದು ಯುಜಿಸಿಗೆ ಪತ್ರ ಬರೆದಿದ್ದು, ನೂತನ ನಿಯಮ 2026-27ನೇ ಸಾಲಿನಿಂದಲೇ ಜಾರಿಗೆ ಬರಲಿದೆ. ಸರ್ಕಾರಿ ಹಾಗೂ 608 ಖಾಸಗಿ ಕಾಲೇಜು ಸೇರಿ 640 ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳಿವೆ. ಹೊಸ ನಿಯಮ ಜಾರಿಯಾದರೆ 450 ರಿಂದ 500 ಕಾಲೇಜುಗಳಿಗೆ ಅರ್ಹ ಅಭ್ಯರ್ಥಿಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.








