ಬೆಂಗಳೂರು : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಚಿಸಿರುವ ಬಡವಾಣೆಗಳಲ್ಲಿನ ಬಿ-ಖಾತಾ ನಿವೇಶನ / ಕಟ್ಟಡ / ಅಪಾರ್ಟ್ಮೆಂಟ್ / ಫ್ಲಾಟ್ಗಳಿಗೆ ಎ-ಖಾತಾ ನೀಡುವ ಕುರಿತು ರಾಜ್ಯ ಸರ್ಕಾವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ಹೊಂದಿರುವ ನಿವೇಶನಗಳಲ್ಲಿ ಅನಧಿಕೃತ ನಿರ್ಮಾಣಗಳಿಗೆ ಯಾವುದೇ ಕಟ್ಟಡ ವಿನ್ಯಾಸ ಅನುಮೋದನೆಯನ್ನು ನೀಡದ ಕಾರಣ, ಇದು ಅನಿಯಂತ್ರಿತ ನಿರ್ಮಾಣಗಳಿಗೆ ಕಾರಣವಾಗುತ್ತಿರುವುದರಿಂದ ಅಂತಹ ಸಂದರ್ಭಗಳಲ್ಲಿ ಈ ಕೆಳಗಿನ ಕ್ರಮಗಳನ್ನು ಅನ್ವಯಿಸತಕ್ಕದ್ದು.
a. ಖಾಲಿ ನಿವೇಶನಕ್ಕೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಖಾಲಿ ನಿವೇಶನಕ್ಕೆ ಅಥವಾ ಭೂಮಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪ್ರಕಾರ “ಸಾರ್ವಜನಿಕ ರಸ್ತೆ” ಎಂದು ಘೋಷಿಸುವುದು.
b. ಸದರಿ ಆಸ್ತಿ ಭೂಪರಿವರ್ತನೆ ಆಗದ ಜಮೀನಿನ ವ್ಯಾಪ್ತಿಯಲ್ಲಿ ಇದ್ದಲ್ಲಿ, ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95 ರಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಬೇಕು ಅಥವಾ ಸದರಿ ಕಾಯ್ದೆಯ ಕಲಂ 95 ರ ತಿದ್ದುಪಡಿಯಂತೆ ಸದರಿ ಭೂಮಿಯು ನಗರ ಸ್ಥಳಿಯ ಸಂಸ್ಥೆಗಳ ಅನುಮೋದಿತ ಪರಿಷ್ಕೃತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಬಂದರೆ, ಅನುಮೋದಿತ ಮಾಸ್ಟರ್ ಪ್ಲಾನ್ ನಲ್ಲಿ ಸೂಚಿಸಿದಂತೆ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95(7) ರಡಿಯಲ್ಲಿ ನಿಗಧಿಪಡಿಸಿದ ಶುಲ್ಕವನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 17 ರಡಿಯಲ್ಲಿ ಅನುಮೋದನೆ ಪಡೆಯುವಾಗ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿದಾರರು ಪಾವತಿಸತಕ್ಕದ್ದು.
c. ಭೂಪರಿವರ್ತನೆ ನಂತರದಲ್ಲಿ ಅಂತಹ ಖಾಲಿ ನಿವೇಶನಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 17 ರಡಿಯಲ್ಲಿ “ಏಕ ನಿವೇಶನ ಅಥವಾ ಬಹು ನಿವೇಶನ ವಿನ್ಯಾಸ” ಆಗಿ ಸಂಬಂಧಿತ ಅನುಮೋದನೆಯನ್ನು ನೀಡುವುದು.
d. ವಿನ್ಯಾಸ ಅನುಮೋದನೆ ಪಡೆದ ನಂತರ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 106 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ ಕಲಂ 112 ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕೃತ (ಎ-ಖಾತಾ) ಖಾತಾ ನೀಡುವುದು.
2. ನಗರ ಸ್ಥಳೀಯ ಸಂಸ್ಥೆಗಳಿಂದ ಈಗಾಗಲೇ ಬಿ-ಖಾತಾ ಪಡೆದು ಅಥವಾ ಪಡೆಯದೆ ಪರವಾನಿಗೆ ಇಲ್ಲದೇ ನಿರ್ಮಾಣ ಮಾಡಲಾದ ಕಟ್ಟಡಗಳು:
a. ಕಟ್ಟಡ ನಿರ್ಮಾಣ ಮಾಡಿರುವ ನಿವೇಶನಕ್ಕೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಕಟ್ಟಡ ನಿರ್ಮಾಣ ಮಾಡಿರುವ ನಿವೇಶನಕ್ಕೆ ಅಥವಾ ಭೂಮಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪ್ರಕಾರ “ಸಾರ್ವಜನಿಕ ರಸ್ತೆ” ಎಂದು ಘೋಷಿಸುವುದು.
b. ಸದರಿ ಆಸ್ತಿ ಭೂಪರಿವರ್ತನೆ ಆಗದ ಜಮೀನಿನ ವ್ಯಾಪ್ತಿಯಲ್ಲಿ ಇದ್ದಲ್ಲಿ, ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95 ರಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಬೇಕು ಅಥವಾ ಸದರಿ ಕಾಯ್ದೆಯ ಕಲಂ 95 ರ ತಿದ್ದುಪಡಿಯಂತೆ ಸದರಿ ಭೂಮಿಯು ನಗರ ಸ್ಥಳಿಯ ಸಂಸ್ಥೆಗಳ ಅನುಮೋದಿತ ಪರಿಷ್ಕೃತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಬಂದರೆ, ಅನುಮೋದಿತ ಮಾಸ್ಟರ್ ಪ್ಲಾನ್ ನಲ್ಲಿ ಸೂಚಿಸಿದಂತೆ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95(7) ರಡಿಯಲ್ಲಿ ನಿಗಧಿಪಡಿಸಿದ ಶುಲ್ಕವನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 17 ರಡಿಯಲ್ಲಿ ಅನುಮೋದನೆ ಪಡೆಯುವಾಗ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿದಾರರು ಪಾವತಿಸತಕ್ಕದ್ದು.
c. ಭೂಪರಿವರ್ತನೆ ನಂತರದಲ್ಲಿ ಕಟ್ಟಡವಿರುವ ನಿವೇಶನಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 17 ರಡಿಯಲ್ಲಿ “ಏಕ ನಿವೇಶನ ಅಥವಾ ಬಹು ನಿವೇಶನ ವಿನ್ಯಾಸ” ಆಗಿ ಸಂಬಂಧಿತ ಅನುಮೋದನೆಯನ್ನು ನೀಡುವುದು.
d. ವಿನ್ಯಾಸ ಅನುಮೋದನೆ ಪಡೆದ ನಂತರ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 106 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ ಕಲಂ 112 ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕೃತ (ಎ-ಖಾತಾ) ಖಾತಾ ನೀಡುವುದು.
e. ಅಸ್ತಿತ್ವದಲ್ಲಿರುವ ಕಟ್ಟಡವು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 187 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ಕಲಂ 300 ಅಥವಾ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರಡಿಯಲ್ಲಿ ಅಥವಾ ಸದರಿ ಕಾಯ್ದೆಗಳಡಿ ಮಾಡಲಾದ ವಲಯ ನಿಯಮಗಳನ್ವಯ ಕಟ್ಟಡ ಪರವಾನಿಗೆ ನೀಡಲು ಅರ್ಹವಾಗಿದ್ದಲ್ಲಿ, ಕಟ್ಟಡ ಪರವಾನಿಗೆ ನೀಡುವುದು ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವುದು.
f. ಒಂದು ವೇಳೆ ಅಂತಹ ಕಟ್ಟಡವು ವಲಯ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ, ಸದರಿ ಕಟ್ಟಡಕ್ಕೆ “ವಲಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡ” ಎಂದು ಷರಾ ದಾಖಲಿಸಿ, ಬಿ-ಖಾತಾ ನೀಡುವುದು. ಕಟ್ಟಡಗಳನ್ನು ವಲಯ ನಿಮಾವಳಿಗಳಿಗೆ ಹಾಗೂ ಮಹಾಯೋಜನೆಗೆ ಅನುಗುಣವಾಗಿಸಲಾದಲ್ಲಿ ಅಂಥಹ ಪ್ರಕರಣಗಳಲ್ಲಿ ಎ-ಖಾತಾ ನೀಡುವುದು.
3. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ಉಲ್ಲಂಘಿಸಿ ನಿರ್ಮಾಣ ಮಾಡಲಾದ Apartment / ಘಟಕಗಳು:
a. ಅನುಮೋದನೆಯೊಂದಿಗೆ ನಿರ್ಮಿಸಲಾದ Apartment / ಘಟಕಕ್ಕೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ Apartment / ಘಟಕಕ್ಕೆ ಅಥವಾ ಭೂಮಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪುಕಾರ “ಸಾರ್ವಜನಿಕ ರಸ್ತೆ” ಎಂದು ಘೋಷಿಸುವುದು.