ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ನೀಡಿದಂತ ರಿತ್ತಿ ಕುಟುಂಬಕ್ಕೆ ಸರ್ಕಾರ ಬಂಫರ್ ಗಿಫ್ಟ್ ನೀಡಿದೆ. ಮನೆ ನಿರ್ಮಾಣಕ್ಕೆ ನಿವೇಶನ, ಜೊತೆಗೆ 5 ಲಕ್ಷ ನಗದು ಹಾಗೂ ಕಸ್ತೂರೆವ್ವಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿದೆ.
ಇಂದು ಸಚಿವ ಹೆಚ್.ಕೆ ಪಾಟೀಲ್ ಅವರು ರಿತ್ತಿ ಕುಟುಂಬಕ್ಕೆ 30X40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕೆ 5 ಲಕ್ಷ ನಗದನ್ನು ನೀಡಿದರು. ಇದಲ್ಲದೇ ಕಸ್ತೂರೆವ್ವಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸದ ಆದೇಶ ಪತ್ರವನ್ನು ನೀಡಿದರು.
ರತ್ತಿ ಕುಟುಂಬವು ಮನೆ ನಿರ್ಮಾಣಕ್ಕಾಗಿ ಪಾಯ ತೆಗೆಯುತ್ತಿದ್ದಂತ ಸಂದರ್ಭದಲ್ಲಿ ಪುರಾತನ ಬಂಗಾರದ ಮಡಿಕೆ ದೊರೆತಿತ್ತು. ಅದನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಅದೇ ಜಾಗದಲ್ಲಿ ಉತ್ಖನನಗೆ ಪುರಾತತ್ವ ಇಲಾಖೆ ನಿರ್ಧರಿಸಿತ್ತು. ಹೀಗಾಗಿ ಪರ್ಯಾಯ ನಿವೇಶನ ನೀಡುವಂತೆ ಸರ್ಕಾರಕ್ಕೆ ಕುಟುಂಬ ಮನವಿ ಮಾಡಿತ್ತು.
ಈ ಹಿನ್ನಲೆಯಲ್ಲಿ ರಿತ್ತಿ ಕುಟುಂಬಕ್ಕೆ ಸಚಿವ ಹೆಚ್.ಕೆ ಪಾಟೀಲ್ ಅವರು ಇಂದು ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿ, ನಿವೇಶನ ಹಂಚಿಕೆ ಪತ್ರ, ರಿತ್ತಿ ಕುಟುಂಬದ ಕಸ್ತೂರೆವ್ವಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಪತ್ರ ಹಾಗೂ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 5 ಲಕ್ಷ ನಗದನ್ನು ಹಸ್ತಾಂತರಿಸಿದರು.
ಸಾಗರದ ಮಾರಿಕಾಂಬ ದೇವಾಲಯದ ಶಾಲೆ, ಸಭಾಭವನಕ್ಕೆ ಸರ್ಕಾರದಿಂದ ಅನುದಾನ; ಶಾಸಕ ಗೋಪಾಲಕೃಷ್ಣ ಬೇಳೂರು








