ಮೈಸೂರು: ದಕ್ಷ ಪೊಲೀಸ್ ಅಧಿಕಾರಿ ಎಂಬುದಾಗಿಯೇ ಹೆಸರಾದಂತ ಮೂಲತಃ ಮೈಸೂರಿನ, ಸದ್ಯ ಕಲಬುರ್ಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ಪುಟ್ಟಮಾದಯ್ಯ ಎಂ ಸೇರಿದಂತೆ ಐವರಿಗೆ ಭಾರತದ 77ನೇ ಗಣರಾಜ್ಯೋತವ ಅಂಗವಾಗಿ ಕೇಂದ್ರ ಸರ್ಕಾರ ನೀಡುವಂತ 2026ನೇ ಸಾಲಿನ ಪೊಲೀಸ್ ಉತ್ಕೃಷ್ಟ ರಾಷ್ಟ್ರಪತಿ ಪದಕವನ್ನು ಘೋಷಿಸಲಾಗಿದೆ.
ಐಪಿಎಸ್ ಅಧಿಕಾರಿ ಪುಟ್ಟಮಾದಯ್ಯ ಅವರು ಸಾರ್ವಜನಿಕ ಸೇವೆಗೆ ಸಲ್ಲಿಸಿದಂತ ಮಹತ್ವದ ಕೊಡುಗೆಯನ್ನು ಕೇಂದ್ರ ಸರ್ಕಾರ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಗೌರವವನ್ನು ರಾಷ್ಟ್ರಪತಿಯವರಿಂದ ನೀಡಲಾಗುತ್ತಿರುವಂತ ಪೊಲೀಸ್ ಶ್ರೇಣಿಯ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಮೈಸೂರು ಪೊಲೀಸ್ ಆಯುಕ್ತರಾದಂತ ಸೀಮಾ ಲಾಟ್ಕರ್ ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಗಳಾದ ಸವೀತಾ.ಎಸ್, ಬೆಳಗಾವಿಯ ಡಾ.ಚೇತನ್ ಸಿಂಗ್ ರಾಥೋಡ್ ಹಾಗೂ ಮಂಗಳೂರಿನ ಅಮಿತ್ ಸಿಂಗ್ ಅವರಿಗೂ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕವನ್ನು ಘೋಷಿಸಲಾಗಿದೆ.
ನಾಳೆ ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಹಿನ್ನಲೆ: ಈ ಸಂಚಾರ ಬದಲಾವಣೆ | Bengaluru Traffic Update
SHOCKING: ಮಾಜಿ ಪ್ರೇಮಿಯ ಪತ್ನಿಗೆ ‘HIV’ ಇಂಜೆಕ್ಷನ್ ಚುಚ್ಚಿದ ಮಹಿಳೆ








