ಬೆಂಗಳೂರು: ಬಿಜೆಪಿ ಮುಖಂಡ ವಿಕಾಸ್ ಪುತ್ತೂರುಗೆ ದ್ವೇಷ ಭಾಷಣ ಮಸೂದೆಯ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿದ್ದು ತಪ್ಪು ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಮುಖಂಡ ವಿಕಾಸ್ ಪುತ್ತೂರುಗೆ ದ್ವೇಷ ಭಾಷಣ ಮಸೂದೆಯಡಿ ಪೊಲೀಸರು ನೋಟಿಸ್ ನೀಡಿದ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದರು.
ರಾಜ್ಯಪಾಲರು ಇನ್ನೂ ಮಸೂದೆಗೆ ಸಹಿಯನ್ನೇ ಹಾಕಿಲ್ಲ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿನ ವಿವಿಧ ಸೆಕ್ಷನ್ ಗಳಡಿ ನೋಟಿಸ್ ನೀಡಬಹುದು. ದ್ವೇಷ ಭಾಷಣದ ಮಸೂದೆ ಕಾನೂನು ಆಗದೇ ಇರುವ ಕಾರಣ ಆ ಮಸೂದೆಯ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿದ್ದು ತಪ್ಪು. ಯಾಕೆ ಆ ರೀತಿಯಾಗಿ ಮಾಡಿದ್ದಾರೆ ಎನ್ನುವುದು ನೋಡಬೇಕೆಂದರು.
ರಾಜ್ಯದಲ್ಲಿ ಸುಮಾರು 11 ಲಕ್ಷ ಕೋಟಿ ಹೂಡಿಕೆಗೆ ಹೂಡಿಕೆದಾರರು ಸಿದ್ಧರಾಗಿದ್ದಾರೆ: ಡಿಸಿಎಂ ಡಿ.ಕೆ ಶಿವಕುಮಾರ್








