ಬೆಂಗಳೂರು : ರಾಜ್ಯ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ದರಖಾಸ್ತು, ಪೋಡಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ದರಖಾಸ್ತು, ಪೋಡಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸರ್ಕಾರ ಕೈಗೊಂಡ ಕ್ರಮಗಳು ಈ ಕೆಳಕಂಡಂತಿವೆ:
1) ಇಲಾಖೆಯಲ್ಲಿ ಅಳತೆ ಕೋರಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಮೋಜಿಣಿ ತಂತ್ರಾಂಶದ ಮುಖಾಂತರ ಆನ್ ಲೈನ್ ನಲ್ಲಿ ಸ್ವೀಕರಿಸಲಾಗುತ್ತಿದ್ದು ತಂತ್ರಾಂಶದ ಪ್ರತಿ ಹಂತದಲ್ಲಿಯೂ FIFO (ಸರದಿ ಸಾಲಿನಂತೆ) ಅಳವಡಿಸಲಾಗಿದೆ. ಸರದಿ ಸಾಲಿನಂತೆ ಅಳತೆಗಾಗಿ ಭೂಮಾಪಕರಿಗೆ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ವಿತರಿಸಲಾಗುತ್ತಿದೆ. ಪ್ರಕರಣದಲ್ಲಿ ಅಳತೆಯಾದ ನಂತರ ಭೂಮಾಪಕರುಗಳಿಗೆ ಕಡತಗಳು ಹಂಚಿಕೆಯಾದಂತೆ ಸರದಿ ಸಾಲಿನಂತೆ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಲು ಹಾಗೂ ಅಪ್ಲೋಡ್ ಮಾಡಿರುವ ಕಡತಗಳ ಪರಿಶೀಲನೆ ಮತ್ತು ಅನುಮೋದನೆಯನ್ನು ಸಹಾ ತಂತ್ರಾಂಶದ ಮುಖಾಂತರ ಆನ್ಲೈನ್ ನಲ್ಲೇ ಸರದಿ ಸಾಲಿನಂತೆ ನಿರ್ವಹಿಸುವ ಮೂಲಕ ಪ್ರಕರಣಗಳ ವಿಲೆವಾರಿ ಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ಕ್ರಮವಹಿಸಲಾಗುತ್ತಿದೆ. ಇಂತಹ ಪ್ರಕರಣಗಳ ಪೈಕಿ ದರಖಾಸ್ತು ಪೋಡಿ ಪ್ರಕರಣಗಳನ್ನು ಪ್ರತ್ಯೇಕಿಸಿ, ಪ್ರತ್ಯೇಕವಾಗಿ ಪೋಡಿ ಪ್ರಕ್ರಿಯೆಯನ್ನು ಜರುಗಿಸಲಾಗುತ್ತಿದೆ.
2) ಕಂದಾಯ ಇಲಾಖೆಯಿಂದ ಪಹಣಿ ತಿದ್ದುಪಡಿ ಬಗ್ಗೆ, ಕಂದಾಯ ಅದಾಲತ್ ಗಳನ್ನು ನಡೆಸಲಾಗುತ್ತಿದೆ.
3) ಕಂದಾಯ ಇಲಾಖೆಯ ಅಭಿಲೇಖಾಲಯದ ಎಲ್ಲಾ ಮಂಜೂರಿಗೆ ಸಂಬಂಧಿಸಿದ ಕಡತಗಳನ್ನು Cataloging and Indexing ಮಾಡಲು ಸೂಚಿಸಿದ್ದು ಅದರಂತೆ ಕ್ರಮ ವಹಿಸಲಾಗುತ್ತಿದೆ.
4) ಮಂಜೂರಿ ಜಮೀನುಗಳ ಪೋಡಿ ದುರಸ್ತಿ ಕಾರ್ಯವನ್ನು ಸಂಪೂರ್ಣವಾಗಿ ಆನ್ಲೈನ್ ಮುಖಾಂತರ ಪಾರದರ್ಶಕವಾಗಿ ನಿರ್ವಹಿಸುವ ಸಲುವಾಗಿ ಭೂಮಿ ಉಸ್ತುವಾರಿ ಕೋಶದ ಸಹಯೊಗದಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ.
5) ಪಹಣಿಯಲ್ಲಿನ ಮಾಲೀಕರ ಹೆಸರು/ಪೌತಿ ಖಾತೆ, ಇತ್ಯಾದಿಗಳ ಕುರಿತಂತೆ ತಿದ್ದುಪಡಿ ಮಾಡುವ ಸಂಬಂಧ ಕಂದಾಯ ಅದಾಲತ್ ಗಳನ್ನು ನಡೆಸಲಾಗುತ್ತಿದೆ.
6) ನಮೂನೆ 1 ರಿಂದ 5 ಅನ್ನು ಭರ್ತಿ ಮಾಡಲು ಅಗತ್ಯ ಸೂಚನೆ ಮತ್ತು ಮಾರ್ಗಸೂಚಿಗಳನ್ನು ನೀಡಲಾಗಿದೆ.
7) ವಿಡಿಯೋ ಸಂವಾದ ಮತ್ತು ವಿಭಾಗವಾರು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಕ್ತ ಮಾರ್ಗದರ್ಶನ ಮತ್ತು ಅಗತ್ಯ ಸೂಚನೆ ನೀಡಲಾಗುತ್ತಿದೆ.
8) ಹೆಚ್ಚಿನ ಪ್ರಕರಣಗಳು ಬಾಕಿ ಇರುವ ತಾಲ್ಲೂಕುಗಳಿಗೆ ಕಡಿಮೆ ಪ್ರಕರಣಗಳು ಬಾಕಿ ಇರುವ ತಾಲ್ಲೂಕಿ ನಿಂದ ಭೂಮಾಪಕರನ್ನು ನಿಯೋಜನೆ ಮಾಡಿ ಪ್ರಕರಣಗಳನ್ನು ವಿಲೇಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಬಾಕಿ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ.









