ನವದೆಹಲಿ: ಎಸ್ಐಆರ್ ಹೆಸರಿನಲ್ಲಿ ಗುಜರಾತ್ನಲ್ಲಿ ಮಾಡುತ್ತಿರುವುದು ‘ಸುವ್ಯವಸ್ಥಿತ, ಸಂಘಟಿತ ಮತ್ತು ಕಾರ್ಯತಂತ್ರದ ಮತ ಚೋರಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
“ಒಬ್ಬ ವ್ಯಕ್ತಿ, ಒಂದು ಮತ” ಎಂಬ ಸಾಂವಿಧಾನಿಕ ಹಕ್ಕನ್ನು ನಾಶಪಡಿಸುವ ಅಸ್ತ್ರವಾಗಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ಪರಿವರ್ತಿಸಲಾಗಿದೆ, ಇದರಿಂದಾಗಿ ಬಿಜೆಪಿಯು ಅಧಿಕಾರದಲ್ಲಿ ಇರಬೇಕು ಎಂದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.
“ಎಸ್ ಐಆರ್ ಎಲ್ಲಿ ಇದೆಯೋ ಅಲ್ಲಿ ಮತ ಕಳ್ಳತನ ನಡೆಯುತ್ತದೆ. ಎಸ್ಐಆರ್ ಹೆಸರಿನಲ್ಲಿ ಗುಜರಾತ್ನಲ್ಲಿ ಮಾಡುತ್ತಿರುವುದು ಯಾವುದೇ ರೀತಿಯ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಇದು ಸುವ್ಯವಸ್ಥಿತ, ಸಂಘಟಿತ ಮತ್ತು ಕಾರ್ಯತಂತ್ರದ ಮತ ಚೋರಿಯಾಗಿದೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ








