ಶಿವಮೊಗ್ಗ: ಹಾಲಪ್ಪ 5 ಕೋಟಿ ಅಲ್ಲ, 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದರೂ ನಾನು ಎದುರಿಸೋದಕ್ಕೆ ಸಿದ್ಧನಿದ್ದೇನೆ. ಅದಕ್ಕೆಲ್ಲ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ.
ಇಂದು ಸುದ್ದಿಗಾರರು ಮಾನನಷ್ಟ ಮೊಕದ್ದಮೆ ನೋಟಿಸ್ ಕುರಿತಂತೆ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಹಾಲಪ್ಪ ಶಾಸಕರಾಗಿದ್ದಂತ ಸಂದರ್ಭದಲ್ಲಿ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿಯ ರಾಮಪ್ಪನವರ ನಡುವೆ ವೈಮನಸ್ಸು ಇದ್ದ ಕಾರಣ, ಅಂದಿನ ಬಿಜೆಪಿ ಸರ್ಕಾವು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿತ್ತು. ಆ ಬಗ್ಗೆ ಹಾಲಪ್ಪ ವಿರೋಧ ವ್ಯಕ್ತ ಪಡಿಸಲಿಲ್ಲ. ಅದಕ್ಕೆ ಸಮ್ಮತಿ ಎನ್ನುವಂತೆ ಮೌನವಾಗಿಯೇ ಇದ್ದರು. ಹಾಗಾಗೀ ನಾನು ಬಹಿರಂಗವಾಗಿ ಅವರ ವಿರುದ್ಧ ಮಾತನಾಡಿದ್ದೇನೆ ಎಂದರು.
ಸಿಗಂದೂರು ದೇವಸ್ಥಾನದ ವಿಚಾರವಾಗಿ ನಾನು ಯಾವತ್ತೂ ರಾಜಕೀಯ ಮಾಡುವುದಿಲ್ಲ. ದೇವಿಯ ಸನ್ನಿಧಿಗೆ ನಮ್ಮ ಕುಟುಂಬ ತಲೆ ತಲಾಂತರಿಂದ ನಡೆದುಕೊಳ್ಳುತ್ತಿದೆ. ನಾನು ಸಿಗಂದೂರು ದೇವಿಯ ಭಕ್ತನಾಗಿದ್ದೇನೆ. ನಾನು ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಅಥವಾ ಪೂಜೆ ಮಾಡುವಂತ ಭಟ್ಟರ ಪರವಾಗಿ ಇಲ್ಲ. ನಾನು ಸಿಗಂದೂರು ದೇವಸ್ಥಾನದ ಪರವಾಗಿ ನಿಂತಿದ್ದೇನೆ. ವಿನಾಕಾರಣ ಸಾಕ್ಷ್ಯಾಧಾರಗಳಿಲ್ಲದೇ ನನ್ನ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂಬುದಾಗಿ ಬಹಿರಂಗವಾಗಿ ಹೇಳುವುದು ಎಷ್ಟು ಸರಿ? 5 ಕೋಟಿಯಲ್ಲ 25 ಕೋಟಿ ಹಾಕಲಿ ನಾನು ಹೆದರೋದಿಲ್ಲ. ಎದುರಿಸೋದಕ್ಕೆ ಸಿದ್ಧ ಎಂಬುದಾಗಿ ತಿಳಿಸಿದರು.
BREAKING: ಬೆಂಗಳೂರಿನ ಮೆಜೆಸ್ಟಿಕ್ ಟು ಏರ್ ಪೋರ್ಟ್ ಸಬ್ ಅರ್ಬನ್ ರೈಲು ಯೋಜನೆಗೆ ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








