ಬೆಂಗಳೂರು: ರಾಜ್ಯದಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದ ವೇಳೆಯಲ್ಲೇ ಕೆಲ ಸಚಿವರು ಗೈರು ಹಾಜರಾಗಿದ್ದರ ಬಗ್ಗೆ ವಿಪಕ್ಷಗಳ ಸದಸ್ಯರು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಅಧಿವೇಶನದಕ್ಕೆ ಎಲ್ಲರೂ ಹಾಜರಿರಬೇಕು. ಯಾವುದೇ ಕಾರಣಕ್ಕೂ ಗೈರಾಗದಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವಿಧಾನಮಂಡಲದ ಅಧಿವೇಶನಕ್ಕೆ ಸಚಿವರೇ ಗೈರು ಹಾಜರಾಗುವುದರಿಂದ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ವಿವಿಧ ಕಾರಣಗಳನ್ನು ನೀಡಿ ಸದನಕ್ಕೆ ಸಚಿವರು ಗೈರ ಹಾಜರಾಗಬಾರದು. ಖುದ್ದು ಹಾಜರಿರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಧಿವೇಶನ ನಡೆಯುತ್ತಿರುವಂತ ಸಂದರ್ಭದಲ್ಲಿಯೇ ಆಯಾ ಸಚಿವರು ತಮ್ಮ ಇಲಾಖೆ ಅಥವಾ ಬೇರೆ ಯಾವುದೇ ಸಭೆ ಸಮಾರಂಭಗಳನ್ನು ಆಯೋಜಿಸಬಾರದು. ಪ್ರತಿ ದಿನವೂ ಸದನದಕ್ಕೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಖುದ್ದು ಹಾಜರಾಗಿ ಎಂಬುದಾಗಿ ಸೂಚಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
SHOCKING: ತಂದೆಗೆ ಚಾಕುವಿನಿಂದ ಇರಿದ ಬಳಿಕ ಕೋವಿಯಿಂದ ಶೂಟ್ ಮಾಡಿಕೊಂಡು ಬಾಲಕ ಆತ್ಮಹತ್ಯೆ
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








