ಇಸ್ಲಮಾಬಾದ್: ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಡೋದಕ್ಕೆ ಬಾಂಗ್ಲಾದೇಶ ನಿರಾಕರಿಸಿತ್ತು. ಹೀಗಾಗಿ ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಕೋಕ್ ನೀಡಿ, ಸ್ಕಾಟ್ ಲ್ಯಾಂಡ್ ತಂಡವನ್ನು ಇನ್ ಮಾಡಲಾಗಿತ್ತು. ಈ ಬೆನ್ನಲ್ಲೇ ಟಿ20 ವಿಶ್ವಕಪ್ ಬಾಯ್ ಕಾಟ್ ಮಾಡೋದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ.
ಹೌದು ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬಾಯ್ ಕಾಟ್ ಮಾಡೋದಾಗಿ ಪಾಕ್ ಬೆದರಿಕೆ ಹಾಕಿದೆ. ಟಿ20 ವಿಶ್ವಕಪ್ ನಿಂದ ಬಾಂಗ್ಲಾದೇಶ ಹೊರಬಿದ್ದ ಬೆನ್ನಲ್ಲೇ ಪಾಕ್ ಈ ಕ್ಯಾತೆ ತೆಗೆದಿದೆ. ಬಾಂಗ್ಲಾ ಹೊರಬಿದ್ರೆ ತಾನೂ ಹೊರಗುಳಿಯೋದಾಗಿ ಬೆದರಿಕೆ ಹಾಕಿದೆ.
ಈ ಬಗ್ಗೆ ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕಿದೆ. ಬಾಂಗ್ಲಾ ಬೇಡಿಕೆ ಒಪ್ಪದೇ ಐಸಿಸಿಯಿಂದ ಅನ್ಯಾಯವೆಂದು ಪಾಕ್ ಕಿಡಿಕಾರಿದೆ. ಪಾಕ್ ಕ್ಯಾತೆ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ಐಸಿಸಿ ನೀಡಿಲ್ಲ.
ರಾಜ್ಯ ಸರ್ಕಾರದಿಂದ ‘MLC’ಗಳಿಗೆ ಭಂಪರ್ ಗಿಫ್ಟ್: ‘299 ಕೋಟಿ ಅನುದಾನ’ ಬಿಡುಗಡೆ
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ







