ಬೆಂಗಳೂರು: ನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದಲ್ಲಿ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಲ್ಲಿ ಟಾಟಾ ಏಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ನೆಲಮಂಗಲದ ಗುಂಡೇನಹಳ್ಳಿ ಗೇಟ್ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಮನೆಗೆ ದಿನಸಿ ಖರೀದಿಸಿ ಬೈಕ್ ನಲ್ಲಿ ತಾಯಿ-ಮಗ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ 45 ವರ್ಷದ ಶೈಲಜಾ, 26 ವರ್ಷದ ಪ್ರಜ್ವಲ್ ಸಾವನ್ನಪ್ಪಿದ್ದಾರೆ. ದಿನಸಿಯನ್ನು ಖರೀದಿಸಿ ಮನೆಗೆ ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಟಾಟಾ ಏಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ
ಬಳ್ಳಾರಿಯಲ್ಲಿ ‘ರೆಡ್ಡಿ ಮಾಡಲ್ ಹೌಸ್’ಗೆ ಸಿಗರೇಟ್ ಕಿಡಿಯಿಂದ ಬೆಂಕಿ ಶಂಕೆ: ಎಸ್ಪಿ ಮಾಹಿತಿ








