ಬಳ್ಳಾರಿ: ಜಿಲ್ಲೆಯಲ್ಲಿ ಬ್ಯಾನರ್ ಗಲಾಟೆ ಬಳಿಕ ಮತ್ತೊಂದು ಘಟನೆ ಎನ್ನುವಂತೆ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲುಗೆ ಸೇರಿದಂತ ಮಾಡೆಲ್ ಹೌಸ್ ಗೆ ಬೆಂಕಿ ನಿನ್ನೆ ಬಿದ್ದಿತ್ತು. ಆದರೇ ಇದೊಂದು ಸಿಗರೇಟ್ ನಿಂದ ಬೆಂಕಿ ತಗುಲಿರುವಂತ ಶಂಕೆ ಇರುವುದಾಗಿ ಎಸ್ಪಿ ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ 8 ಮಂದಿಯನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಡಿ ಪನ್ನೇಕರ್ ಅವರು, ರೆಡ್ಡಿ ಮಾಡೆಲ್ ಹೌಸ್ ಗೆ ರೀಲ್ಸ್, ಪೋಟೋ ಶೂಟ್ ಗೆ ಹುಡುಗರು ಬಂದಿದ್ದರೆಂಬ ಮಾಹಿತಿ ಇದೆ. ಪೋಟೋ ಶೂಟ್ ಗೆ ಮನೆಯ ಮೊದಲ ಮಹಡಿಗೆ ಹೋಗಿದ್ರು. ಈ ವೇಳೆ ಸಿಗರೇಟ್ ಕಿಡಿಯಿಂದ ಮಾಡೆಲ್ ಗೆ ಬೆಂಕಿ ಬಿದ್ದಿರುವಂತ ಸಾಧ್ಯತೆ ಇದೆ. ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ಬಳ್ಳಾರಿಯ ರೆಡ್ಡಿ ಮಾಡೆಲ್ ಹೌಸ್ ನಲ್ಲಿ ಸ್ಥಳ ಪರಿಶೀಲನೆ ವೇಳೆಯಲ್ಲಿ ಸಿಗರೇಟ್ ತುಂಡುಗಳು ಬಿದ್ದಿರುವುದು ಕಂಡು ಬಂದಿದೆ. ರೀಲ್ಸ್ ವೇಳೆ ಸಿಗರೇಟ್ ತಾಗಿ ಬೆಂಕಿ ಹೊತ್ತಿಕೊಂಡಿರಬಹುದು. ಈ ಘಟನೆ ಸಂಬಂಧ 8 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








