ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರಿಂದ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಲಾಯಿತು. ವಿಪಕ್ಷಗಳ ಸದಸ್ಯರಿಂದ ಗದ್ದಲ ಕೋಲಾಹಲವನ್ನೇ ಎಬ್ಬಿಸಲಾಯಿತು. ಈ ಹಿನ್ನಲೆಯಲ್ಲಿ ಸದನದ ಕಲಾಪವನ್ನು ಮಂಗಳವಾರಕ್ಕೆ ಮುಂಡೂಡಲಾಗಿದೆ.
ಇಂದು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಉಭಯ ಸದನಗಳಲ್ಲಿ ಅಬಕಾರಿ ಇಲಾಖೆಯ ಲಂಚಾವತಾರದ ಬಗ್ಗೆ ವಿಪಕ್ಷಗಳ ಸದಸ್ಯರಿಂದ ಭಾರೀ ಆಕ್ರೋಶವೇ ವ್ಯಕ್ತವಾಯಿತು. ಈ ವಿಷಯದ ಕುರಿತಂತೆ ಚರ್ಚೆಗೆ ಅವಕಾಶವನ್ನು ನೀಡುವಂತೆ ಒತ್ತಾಯಿಸಿದ್ದಲ್ಲದೇ, ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆಗೂ ಆಗ್ರಹಿಸಲಾಯಿತು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ವಿಚಾರವಾಗಿ ವಿಧಾನ ಪರಿಷತ್ತಿನಲ್ಲಿ ಗದ್ದಲ, ಕೋಲಾಹಲವನ್ನೇ ವಿಪಕ್ಷಗಳ ಸದಸ್ಯರು ನಡೆಸಿದರು. ಚರ್ಚೆಯ ಜೊತೆಗೆ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆಯೂ ಒತ್ತಾಯಿಸಿ ಧರಣಿ ನಡೆಸಿದರು. ಹೀಗಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿಕೆ ಮಾಡಿದರು.
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ








