ಕೊಪ್ಪಳ : ಕೊಪ್ಪಳ ಜಿಲ್ಲೆಯ ಜಮೀನಿನಲ್ಲಿ ಪವಾಡ ನಡೆದಿದ್ದು, ಜಮೀನಿನ ಹುತ್ತದಲ್ಲಿ ಅಲಾಯಿ ದೇವರು ಪತ್ತೆಯಾಗಿರುವ ಘಟನೆ ನಡೆದಿದೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದ ಯಮನೂರಪ್ಪ ಗೊಣ್ಣಾಗರ ಎಂಬುವರ ಜಮೀನಿನಲ್ಲಿ ಅಲಾಯಿ ದೇವರುಗಳು ಪತ್ತೆಯಾಗಿದ್ದು, ಜನರಲ್ಲಿ ಅಚ್ಚರಿವುಂಟು ಮಾಡಿವೆ.
ಜಮೀನಿನಲ್ಲಿರುವ ಹುತ್ತ ಅಗೆದಾಗ ಅಲಾಯಿ ದೇವರುಗಳು ಪತ್ತೆಯಾಗಿದ್ದು, ಅಲಾಯಿ ದೇವರುಗಳನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರು ಸದ್ಯಕ್ಕೆ ಮಸೀದಿಯಲ್ಲಿ ಇಟ್ಟಿದ್ದಾರೆ.








