ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಪಾಯ ತೋಡುವಂತ ಸಂದರ್ಭದಲ್ಲಿ ನಿಧಿ ಸಿಕ್ಕಿತ್ತು. ಈ ನಿಧಿಯನ್ನು ಸರ್ಕಾರಕ್ಕೆ ಪ್ರಜ್ವಲ್ ರಿತ್ತಿ ಕುಟುಂಬಸ್ಥರು ಒಪ್ಪಿಸಿದ್ದರು. ಇಂತಹ ಮನೆಯ ಜಾಗದಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ಕಾರ್ಯ ಮುಂದುವರೆಸಲಾಗಿದೆ. ಇದರ ನಡುವೆ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯ್ತಿಯಿಂದ ನಿವೇಶನ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಜ್ವಲ್ ರಿತ್ತಿ ಕುಟುಂಬಸ್ಥರಿಗೆ ನಿವೇಶನ ನೀಡುವುದಾಗಿ ಲಕ್ಕುಂಡಿ ಪಂಚಾಯ್ತಿಯಿಂದ ಘೋಷಣೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ವಿಶೇಷ ಸಭೆಯಲ್ಲಿ ರಿತ್ತಿ ಕುಟುಂಬಸ್ಥರಿಗೆ ನಿವೇಶನ ನೀಡೋದಕ್ಕೆ ನಿರ್ಧರಿಸಲಾಗಿದೆ.
ಜನವರಿ.26ರಂದು ಪ್ರಜ್ವಲ್ ರಿತ್ತಿ ಕುಟುಂಬಸ್ಥರಿಗೆ ನಿವೇಶನದ ಪ್ರಮಾಣ ಪತ್ರವನ್ನು ಹಸ್ತಾಂತರಿಸೋದಕ್ಕೆ ಲಕ್ಕುಂಡಿ ಗ್ರಾಮ ಪಂಚಾಯ್ತಿಯ ವಿಶೇಷ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮೂಲಕ ಬಡ ಕುಟುಂಬಕ್ಕೆ ನಿವೇಶನ ನೀಡೋದಕ್ಕೆ ಸರ್ಕಾರ ನಿರ್ಧರಿಸಿದೆ.
BREAKING: ಮಂಗಳೂರಿನ ಪುತ್ತೂರು ನ್ಯಾಯಾಲಯದ ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ








