ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಗೌರವಾರ್ಥ ಸಾರ್ವಜನಿಕ ಸಮಾರಂಭ ನಡೆಸುವ ಬಗ್ಗೆ ಇರುವ ನಿಯಮಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಸರ್ಕಾರಿ ನೌಕರನ ಗೌರವಾರ್ಥ ಸಾರ್ವಜನಿಕ ಸಮಾರಂಭ ನಡೆಸುವುದು.- ಯಾರೇ ಸರ್ಕಾರಿ ನೌಕರನು, ಸರ್ಕಾರದಿಂದ ಪೂರ್ವಾಮಂಜೂರಾತಿಯನ್ನು ಪಡೆದ ಹೊರತು, ತನ್ನ ಗೌರವಾರ್ಥ ಅಥವಾ ಯಾರೇ ಸರ್ಕಾರಿ ನೌಕರನ ಗೌರವಾರ್ಥ ಯಾವುದೇ ಗೌರವಪೂರ್ವಕ ಅಥವಾ ಸಮಾರೋಪ ಬಿನ್ನವತ್ತಳೆಯನ್ನು ಸ್ವೀಕರಿಸತಕ್ಕದ್ದಲ್ಲ ಅಥವಾ ಯಾವುದೇ ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸತಕ್ಕದ್ದಲ್ಲ ಅಥವಾ ಏರ್ಪಡಿಸಿದ ಯಾವುದೇ ಸಭೆಯಲ್ಲಿ ಅಥವಾ ಯಾವುದೇ ಮನೋರಂಜನ ಕಾರ್ಯಕ್ರಮದಲ್ಲಿ ಭಾಗವಹಿಸತಕ್ಕದ್ದಲ್ಲ:ಪರಂತು,
ಈ ನಿಯಮದಲ್ಲಿರುವುದು ಯಾವುದೂ,-
(i) ಸರ್ಕಾರಿ ನೌಕರನು ಅಥವಾ ಇತರ ಯಾರೇ ಸರ್ಕಾರಿ ನೌಕರನು ನಿವೃತ್ತಿ ಹೊಂದಿದ ಅಥವಾ ವರ್ಗಾವಣೆ ಹೊಂದಿದ ಅಥವಾ ಯಾರೇ ವ್ಯಕ್ತಿಯು ಯಾವುದೇ ಸರ್ಕಾರಿ ಸೇವೆಯನ್ನು ಇತ್ತೀಚೆಗೆ ಬಿಟ್ಟುಹೋದ ಸಂದರ್ಭಗಳಲ್ಲಿ, ಅವನ ಗೌರವಾರ್ಥವಾಗಿ ಏರ್ಪಡಿಸಿದಂತಹ ಪ್ರಮುಖವಾಗಿ ಖಾಸಗಿ ಮತ್ತು ಅನೌಪಚಾರಿಕ ಸ್ವರೂಪದ ಬೀಳ್ಕೊಡುಗೆ ಸಮಾರಂಭಕ್ಕೆ; ಅಥವಾ
(ii) ಸಾರ್ವಜನಿಕ ಸಂಘಗಳು ಅಥವಾ ಸಂಸ್ಥೆಗಳು ಏರ್ಪಡಿಸಿದ ಸರಳ ಮತ್ತು ದುಬಾರಿಯಲ್ಲದ ಆದಾರಾತಿಥ್ಯವನ್ನು ಸ್ವೀಕರಿಸುವುದಕ್ಕೆ ಅನ್ವಯವಾಗತಕ್ಕದ್ದಲ್ಲ.
ಟಿಪ್ಪಣಿ:- ಯಾರೇ ಸರ್ಕಾರಿ ನೌಕರನನ್ನು, ಯಾವುದೇ ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ, ಅದು ಪ್ರಮುಖವಾಗಿ ಖಾಸಗಿ ಅಥವಾ ಅನೌಪಚಾರಿಕ ಸ್ವರೂಪದ್ದಾಗಿದ್ದರೂ, ವಂತಿಗೆಯನ್ನು ನೀಡುವಂತೆ ಯಾವುದೇ ರೀತಿಯ ಒತ್ತಡ ತರುವುದನ್ನು ಅಥವಾ ಪ್ರಭಾವ ಬೀರುವುದನ್ನು ಮತ್ತು ॥ ಅಥವಾ IVನೇ ವರ್ಗಕ್ಕೆ ಸೇರದ ಸರ್ಕಾರಿ ನೌಕರನ ಸತ್ಕಾರಕ್ಕಾಗಿ ಯಾವುದೇ ಸಂದರ್ಭದಲ್ಲಿ ವರ್ಗ- ॥ ಕ್ಕೆ ಅಥವಾ ವರ್ಗ- IV ಕ್ಕೆ ಸೇರಿದ ನೌಕರರಿಂದ ವಂತಿಗೆ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.









