ಬೆಂಗಳೂರು: ನಾಳೆಯ ರಾಜ್ಯಪಾಲರ ವಿಧಾನಮಂಡಲದ ಜಂಟಿ ಅಧಿವೇಶನದ ಭಾಷಣದಲ್ಲಿನ 11 ಪ್ಯಾರಾದಲ್ಲಿ 7 ಅಂಶಗಳನ್ನು ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. 11 ಪ್ಯಾರಾಗಳನ್ನು ಸಂಪೂರ್ಣವಾಗಿ ಕೈಬಿಡದೇ ಇರೋದಕ್ಕೆ ಸರ್ಕಾರ ನಿರ್ಧರಿಸಿದೆ ಎಂಬುದಾಗಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಜೊತೆಗೆ ಆ ವಿಚಾರಗಳನ್ನು ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 11 ಪ್ಯಾರಾ ಕೈಬಿಡಲು ಹೇಳಿದ್ದರು. ಶಬ್ದಗಳ ತಿದ್ದುಪಡಿ ಅಷ್ಟೇ ಬದಲಾವಣೆ ಮಾಡುತ್ತೇವೆ. ಆದರೇ ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.
ಬಡವರ ಪರವಾಗಿ ಇರುವ ಭಾಷಣ ಅದು. ಅದನ್ನು ರಾಜ್ಯಪಾಲರು ಓದಬೇಕು ಅಂತಾ ಕೇಳಿಕೊಳ್ಳುತ್ತೇವೆ. ರಾಜ್ಯದ ಹಿತ ಕಾಪಾಡುವ ಅಂಶವನ್ನ ನಾವು ಬಿಡುವ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ಧರಾಮಯ್ಯ ಜೊತೆ ಮಾತುಕತೆ ಮಾಡಿದ್ದೇವೆ ಎಂದರು.
ಕ್ಯಾಬಿನೆಟ್ ನಿರ್ಧಾರದಂತೆ ಆ ಭಾಷಣವನ್ನೇ ರಾಜ್ಯಪಾಲರು ಓದಬೇಕು. ಭಾಷಣದಲ್ಲಿ ಕೆಲ ಮಾರ್ಪಾಡು ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ. 11 ಪ್ಯಾರಾದಲ್ಲಿನ 7 ಅಂಶಗಳನ್ನು ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. 11 ಪ್ಯಾರಾ ಸಂಪೂರ್ಣವಾಗಿ ಕೈಬಿಡಲು ಸೂಚಿಸಿದ್ದರು ರಾಜ್ಯಪಾಲರು. 11 ಪ್ಯಾರಾವನ್ನ ಸಂಪೂರ್ಣ ಕೈಬಿಡದಿರಲು ಸರ್ಕಾರ ನಿರ್ಧರಿಸಿದೆ ಎಂಬುದಾಗಿ ಹೇಳಿದರು.








