ಶಿವಮೊಗ್ಗ: ನಾನು ಮಾರಿಕಾಂಬಾ ದೇವಿ ಅಮ್ಮನ ದುಡ್ಡು ಹೊಡೆದು ತಿನ್ನುವುದಿಲ್ಲ. ನಾನು ದುಡ್ಡು ತಿಂದಿದ್ದೇನೆ ಎಂದು ಹೇಳಿದವನು ನರಕಕ್ಕೆ ಹೋಗುತ್ತಾನೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ.
ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ ಮಾರಿಜಾತ್ರೆಯಲ್ಲಿ ಅಡ್ಜೆಸ್ಟ್ಮೆಂಟ್ ಮಾಡಿಕೊಂಡು ಅಮ್ಯೂಸ್ಮೆಂಟ್ ಪಾರ್ಕ್ 52 ಲಕ್ಷ ರೂ.ಗೆ ಹರತಾಳು ಹಾಲಪ್ಪ ಕೊಟ್ಟಿದ್ದಾರೆ. ಹರಾಜು ಹಿಡಿದವರು ಹಾಲಪ್ಪ ಶಿಷ್ಟ ಗೌತಮ ಮತ್ತು ಸಂಗಡಿಗರು. ಈ ಬಾರಿ ಅಮ್ಯೂಸ್ಮೆಂಟ್ ಪಾರ್ಕ್ 1.34 ಕೋಟಿ ರೂ.ಗೆ ಹರಾಜು ಆಗಿದೆ. ಬಿ.ಎಚ್.ಲಿಂಗರಾಜ್, ಗೌತಮ್ ಸೇರಿ ಹಾಲಪ್ಪ ಶಿಷ್ಯರೇ ಹರಾಜು ಹಿಡಿದಿದ್ದಾರೆ. ಹಾಗಾದರೆ ಒಂದಕ್ಕೆ ಮೂರರಷ್ಟು ಹೆಚ್ಚಿನ ಹಣಕ್ಕೆ ಹರಾಜು ಹೇಗೆ ಹೋಗಿದೆ ಎಂದರು.
ವಿವಿಧೆಡೆಯಿಂದ ಮಾರಿಕಾಂಬ ಕಮಿಟಿಗೆ ಬಂದ ಹಣವನ್ನು ದೇವಸ್ಥಾನದ ಅಭಿವೃದ್ದಿಗೆ ನಾವು ಉಪಯೋಗಿಸುತ್ತಿದ್ದೇವೆ. ಬೇಳೂರು ಯಾವತ್ತೂ ಅಮ್ಮನ ದುಡ್ಡು ಹೊಡೆದು ತಿನ್ನುವುದಿಲ್ಲ. ನಾನು ದುಡ್ಡು ತಿಂದಿದ್ದೇನೆ ಎಂದು ಹೇಳಿದವನು ನರಕಕ್ಕೆ ಹೋಗುತ್ತಾನೆ ಎಂದು ಗುಡುಗಿದರು.
ಕಳೆದ ಬಾರಿ ಹಾಲಪ್ಪ ಹಣ ಹೊಡೆದು ತಿಂದಿದ್ದಾರೆ. ಮಾತೆತ್ತಿದರೇ ಪ್ರಮಾಣ ಮಾಡುತ್ತೇನೆ ಎನ್ನಲು ಹಾಲಪ್ಪಗೆ ಯೋಗ್ಯತೆ ಇಲ್ಲ. ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ ಎಂದು ಓಡಿ ಹೋಗಿದ್ದಾರೆ. ಸಿಗಂದೂರಿಗೆ ಬಂದು ಈಗ ಪ್ರಮಾಣ ಮಾಡುತ್ತೇನೆ ಎನ್ನುತ್ತಿದ್ದಾರೆ. ಹಾಲಪ್ಪ ಶಾಸಕರಾಗಿದ್ದಾಗ ಪಿತೂರಿಯಿಂದ ಗುರುಮೂರ್ತಿ, ಬಿ.ವೈ.ರಾಘವೇಂದ್ರ ಸೇರಿ ಸಿಗಂದೂರನ್ನು ಮುಜರಾಯಿಗೆ ಕೊಡಲು ಮುಂದಾಗಿದ್ದರು. ರಾಮಪ್ಪನನ್ನು ಓಡಿಸಿ ಭಟ್ಟರಿಗೆ ದೇವಸ್ಥಾನ ನೀಡಿ ತಾನು ಒಳಗೆ ಸೇರಿಕೊಳ್ಳಬೇಕು ಎಂಬುದು ಹಾಲಪ್ಪ ಉದ್ದೇಶವಾಗಿತ್ತು. ಮಾರಿಕಾಂಬಾ ತಾಯಿಯಲ್ಲಿ ಶಕ್ತಿ ಇದ್ದರೇ ಹಾಲಪ್ಪ ನರಕಕ್ಕೆ ಹೋಗುತ್ತಾನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಂದರು.
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








