ಬೆಂಗಳೂರು : ರಾಜ್ಯದಲ್ಲಿನ Land and Building Plan Approval System (LBPAS) – ನಿರ್ಮಾಣ್-2 ತಂತ್ರಾಂಶವನ್ನು ಸಾರ್ವಜನಿಕರ ಉಪಯೋಗಕ್ಕೆ ಸ್ಥಗಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
ಈ ಕುರಿತಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದು, Land and Building Plan Approval System(LBPAS) -ನಿರ್ಮಾಣ್-2 ತಂತ್ರಾಂಶದಲ್ಲಿ ವಿವಿಧ ನಾಗರಿಕ ಸೇವೆಗಳನ್ನು ಆನ್ ಲೈನ್ ಮೂಲಕ ನಾಗರಿಕರಿಗೆ ಒದಗಿಸಲು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. ಸದರಿ ತಂತ್ರಾಂಶದಲ್ಲಿ ಇತ್ತೀಚೆಗೆ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ತೊಂದರೆ ಉಂಟಾಗಿರುವ ಕಾರಣ, ತಂತ್ರಾಂಶವನ್ನು ಸಾರ್ವಜನಿಕ ಉಪಯೋಗಕ್ಕೆ Karnataka State Data Centre(KSDC) ರವರಿಂದ ನಿರ್ಬಂಧಿಸಲಾಗಿರುತ್ತದೆ ಹಾಗೂ ಸದರಿ ತಂತ್ರಾಂಶವನ್ನು ಮರುಸ್ಥಾಪಿಸುವ ಕುರಿತು KSDC ರವರು ಸೂಚಿಸಿರುವಂತೆ Internal ಮತ್ತು External ಆಡಿಟ್ ಪ್ರಕ್ರಿಯೆಗಳು ಚಾಲ್ತಿಯಲ್ಲಿರುತ್ತವೆ. ಸದರಿ ಕಾರ್ಯಗಳು ಪೂರ್ಣಗೊಂಡು ತಂತ್ರಾಂಶವನ್ನು ಸಾರ್ವಜನಿಕ ಉಪಯೋಗಕ್ಕೆ ಮರುಸ್ಥಾಪಿಸಲು 02 ರಿಂದ 03 ವಾರಗಳ ಕಾಲಾವಕಾಶ ಅವಶ್ಯವಿರುವುದಾಗಿ ತಿಳಿದುಬಂದಿರುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಿರ್ಮಾಣಿ-2 ತಂತ್ರಾಂಶದಲ್ಲಿ ಆಡಿಟ್ ಪಕ್ರಿಯೆಗಳು ಪೂರ್ಣಗೊಂಡು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವವರೆಗೆ “ಸಾರ್ವಜನಿಕರು ಸಹಕರಿಸುವಂತೆ” ಹಾಗೂ ULMS ತಂತ್ರಾಂಶವನ್ನು ಬಳಕೆ ಮಾಡುವ ಉದ್ದೇಶದಿಂದ ನಿರ್ಮಾಣ-2 ತಂತ್ರಾಂಶವನ್ನು ಸ್ಥಗಿತಗೊಳಿಸಲಾಗಿರುವುದಿಲ್ಲ ಎಂಬುದಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರವಾಗಿ ಸೂಚನೆಗಳನ್ನು ನೀಡುವಂತೆ ತಿಳಿಸಿದ್ದಾರೆ.

BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ
SHOCKING: ಹಣಕ್ಕಾಗಿ ದೊಡ್ಡಪ್ಪ, ದೊಡ್ಡಮ್ಮನಿಗೆ ಹೈಡೋಸೇಜ್ ಇಂಜೆಕ್ಷನ್ ನೀಡಿ ಕೊಂಡ ಪಾಪಿ ವೈದ್ಯ








