ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದಲ್ಲಿ ವೃದ್ಧ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಈ ರೀತಿಯಾಗಿ ಕೊಲೆ ಮಾಡಿದ್ದಂತ ಆರೋಪಿಯನ್ನು ಬಂಧಿಸಿರುವುದಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ. ಹಣಕ್ಕಾಗಿ ವೃದ್ಧ ದಂಪತಿಗಳಿಗೆ ಹೈಡೋಸೇಜ್ ಇಂಜೆಕ್ಷನ್ ನೀಡಿ ದೊಡ್ಡಪ್ಪ, ದೊಡ್ಡಮ್ಮನನ್ನು ಕೊಂದಿರುವುದಾಗಿ ವೃದ್ಧ ದಂಪತಿಗಳ ಕೊಲೆಯ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಭದ್ರಾವತಿ ನಗರದಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಡಾ.ಮಲ್ಲೇಶ್ ನನ್ನು ಬಂಧಿಸಲಾಗಿದೆ. ಚಿಕ್ಕಪ್ಪನ ಮಗ ಡಾ.ಮಲ್ಲೇಶ್ ನಿಂದ ದಂಪತಿಗಳನ್ನು ಕೊಲೆ ಮಾಡಲಾಗಿದೆ ಎಂದಿದ್ದಾರೆ.
ದೊಡ್ಡಪ್ಪ, ದೊಡ್ಡಮ್ಮನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕೊಲೆ ಮಾಡಲಾಗಿದೆ. ದಂಪತಿಗೆ ಇಂಜೆಕ್ಷನ್ ನೀಡಿ ಕೃತ್ಯ ಎಸಗಿರೋದು ಪತ್ತೆಯಾಗಿದೆ. ಹೈಡೋಸೇಜ್ ಇರುವಂತ ಔಷಧ ನೀಡಿ ಕೊಲೆ ಮಾಡಲಾಗಿದೆ. ತಮ್ಮನ ಮಗ ಎಂದು ನಂಬಿ ಇಂಜೆಕ್ಷನ್ ಅನ್ನು ದೊಡ್ಡಪ್ಪ, ದೊಡ್ಡಮ್ಮ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಆರೋಪಿ ವೈದ್ಯ ಡಾ.ಮಲ್ಲೇಶ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ದೊಡ್ಡಪ್ಪನ ಬಳಿ ಸಾಲ ಕೇಳಿದ್ದರು. ಹಣ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟಿನಲ್ಲಿ ಕೃತ್ಯ ಎಸಗಿರೋದು ಬಹಿರಂಗಗೊಂಡಿದೆ. ದಂಪತಿಯನ್ನು ಕೊಲೆಗೈದು ಮನೆಯಲ್ಲಿದ್ದ ಲಕ್ಷಾಂತರ ಹಣ ದೋಚಿ ಎಸ್ಕೇಪ್ ಆಗಿದ್ದರು. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮಲ್ಲೇಶ್ ನನ್ನು ಬಂಧಿಸಿರುವುದಾಗಿ ಶಿವಮೊಗ್ಗ ಎಸ್ಪಿ ನಿಖಿಲ್ ತಿಳಿಸಿದ್ದಾರೆ.
BIG NEWS: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಅತ್ತಿಗುಂಡಿ ಸಮೀಪದಲ್ಲಿ ಹುಲಿ ಸಂಚಾರ








