ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಸ್ನೇಹಿತರೇ ಗೆಳಯನನ್ನು ಕೊಲೆ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದ ಬಳಿ ಜೊತೆಗಿದ್ದ ಸ್ನೇಹಿತರೇ ವಿನೋದ್ ಕುಮಾರ್ (26) ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ.
ಸ್ನೇಹಿತರು ಜನವರಿ 1 ರಂದು ಪಾರ್ಟಿಗೆ ತೆರಳಿದ್ದರು. ಡ್ರಿಂಕ್ಸ್ ಗೆ ಎಳನೀರು ಬೆರೆಸಲು ವಿನೋದ್ ಮರ ಹತ್ತಿದ್ದ. ಈ ವೇಳೆ ಮರದಿಂದ ಬಿದ್ದ ವಿನೋದ್ ಕುಮಾರ್ ಬೆನ್ನುಮೂಳೆ ಮುರಿದುಹೋಗಿತ್ತು. ಹೀಗಾಗಿ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ಮನೆಗೆ ಕರೆದೊಯ್ಯುವುದಾಗಿ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ.
ಪೊಲೀಸರ ತನಿಖೆಯಿಂದ ಕೊಲೆ ಪ್ರಕರಣ ಬಹಿರಂಗವಾಗಿದ್ದು, ಸದ್ಯ ಸ್ನೇಹಿತನನ್ನು ಕೊಲೆ ಮಾಡಿದ ಸುದೀಪ್, ಪ್ರಜ್ವಲ್ ನನ್ನು ಪೊಲೀಸರು ಬಂಧಿಸಿದ್ದಾರೆ.








