Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ನ್ಯಾಯವಾದಿ ಶ್ರಾವ್ಯ ಸಾಗರ್ ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ರಾಜ್ಯಮಟ್ಟದ ‘ಜೀವವೈವಿಧ್ಯ ಪ್ರಶಸ್ತಿ’ ಗರಿ!

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ
KARNATAKA

ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕದಲ್ಲಿ ಮತ್ತು ಬಿಬಿಎಂಪಿ (ಜಿಬಿಎ) ವ್ಯಾಪ್ತಿಯಲ್ಲಿ ಬರುವ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವಂತೆ ಸಭಾಧ್ಯಕ್ಷರಾದಂತ ಬಸವರಾಜ ಹೊರಟ್ಟಿ ಅವರಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದಂತ ರಮೇಶ್ ಬಾಬು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತಂತೆ ಪತ್ರ ಬರೆದಿರುವಂತ ಅವರು,ಕರ್ನಾಟಕ 14ನೇ ವಿಧಾನಸಭೆಯು 2012-13ನೇ ಸಾಲಿನಲ್ಲಿ ರಾಜ್ಯದ ಮತ್ತು ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ಕ್ಲಬ್ ಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಸದನ ಸಮಿತಿಯನ್ನು ರಚಿಸಿತ್ತು. ಗೌರವಾನ್ವಿತ ಸಮಿತಿಯು 07-06-2013 ರಲ್ಲಿ ಮಧ್ಯಂತರ ವರದಿಯನ್ನು ಸದನದಲ್ಲಿ ಮಂಡಿಸಿರುತ್ತದೆ. ತದನಂತರ 07-02-2017 ರಲ್ಲಿ ಸುಮಾರು 180 ಪುಟಗಳ ಸಮಗ್ರ ವರದಿಯನ್ನು ಸದನ ಸಮಿತಿಯು ಸಭಾಧ್ಯಕ್ಷರಿಗೆ ಸಲ್ಲಿಸಿರುತ್ತದೆ ಎಂದಿದ್ದಾರೆ.

ಸದನ ಸಮಿತಿಯು ಕ್ಲಬ್ ಗಳು ಸರ್ಕಾರದ ನಿಯಮಗಳನ್ನು ಮತ್ತು ಕಾನೂನುಗಳನ್ನು ಗಾಳಿಗೆ ತೂರಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುತ್ತಾರೆ. ಇದರ ಜೊತೆಗೆ ಅನೇಕ ಕ್ಲಬ್ ಗಳಿಗೆ ಭೇಟಿ ನೀಡಿ ಕ್ಲಬ್ ಗಳ ಬೈಲಾ ಮತ್ತು ನಿಯಮಗಳನ್ನು ಪರಿಶೀಲನೆ ಮಾಡಿ ಅವರ ಆಕ್ಷೇಪಣೆಗಳಿಗೂ ಅವಕಾಶವನ್ನು ಕಲ್ಪಿಸಿ, ವರದಿಯನ್ನು ಸಿದ್ಧಪಡಿಸಿ ಮಂಡಿಸಿರುತ್ತಾರೆ. ಇದರ ಜೊತೆಗೆ ಒಂದು ಉದ್ದೇಶಿತ ಮಸೂದೆಯನ್ನು ನೀಡಿರುತ್ತಾರೆ. ಉದ್ದೇಶಿತ ಮಸೂದೆಯು ಜಾರಿಗೊಂಡಲ್ಲಿ, ರಾಜ್ಯದಲ್ಲಿರುವ ಕ್ಲಬ್ ಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ಮತ್ತು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ. ವರದಿ ಮಂಡಿಸಿ ಸುಮಾರು ಎಂಟು ವರ್ಷಗಳು ಗತಿಸಿದ್ದರೂ, ಇಲ್ಲಿಯವರೆಗೂ ಅದು ಅನುಷ್ಠಾನಗೊಂಡಿರುವುದಿಲ್ಲ. ರಾಜ್ಯದ ಹಿತ ದೃಷ್ಟಿಯಿಂದ ಕ್ಲಬ್ ಗಳು ಪಾರದರ್ಶಕವಾಗಿ ನಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚು ಗೊಳಿಸುವ ದೃಷ್ಟಿಯಿಂದ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿರುತ್ತದೆ ಎಂದಿದ್ದಾರೆ.

ಸಮಿತಿಯು ಅನೇಕ ಸಭೆಗಳನ್ನು ನಡೆಸಿ ಮಾಹಿತಿಯನ್ನು ಪಡೆದುಕೊಂಡು ತದನಂತರ ವರದಿಯನ್ನು ನೀಡಿರುತ್ತದೆ. ವರದಿ ನೀಡುವ ಮುನ್ನ ಇತರೆ ರಾಜ್ಯಗಳಿಗೂ ಭೇಟಿ ನೀಡಿ ಕ್ಲಬ್ ಗಳ ಸಂಬಂಧ ಮಾಹಿತಿಯನ್ನು ಪಡೆದುಕೊಂಡು ಸುದೀರ್ಘವಾದ ಅಧ್ಯಯನ ಮಾಡಿ ಉತ್ತಮ ವರದಿಯನ್ನು ನೀಡಿದ್ದು, ಅದನ್ನು ಜಾರಿಗೊಳಿಸಲು ಸಭಾಧ್ಯಕ್ಷರನ್ನು ಕೋರಿರುತ್ತದೆ. ರಾಜ್ಯದ ಹಿತ ದೃಷ್ಟಿಯಿಂದ ಸದನ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸುವುದು ಅವಶ್ಯಕವಾಗಿರುತ್ತದೆ. ಆದುದರಿಂದ ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರು ಸಧನ ಸಮಿತಿ ನೀಡಿರುವ ಕ್ಲಬ್ ಸಂಬಂಧ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಮತ್ತು ಸಮಿತಿಯು ನೀಡಿರುವ ಉದ್ದೇಶಿತ ಮಸೂದೆಯನ್ನು ಜಾರಿಗೊಳಿಸಲು ಮನವಿ ಮಾಡಿದ್ದಾರೆ.

ವೇತನ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ NHM ಗುತ್ತಿಗೆ ನೌಕರರು: ಹೋರಾಟಕ್ಕೆ ಕರೆ ನೀಡಿದ KSHCOEA ಸಂಘ

Share. Facebook Twitter LinkedIn WhatsApp Email

Related Posts

ಸಾಗರದ ನ್ಯಾಯವಾದಿ ಶ್ರಾವ್ಯ ಸಾಗರ್ ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ರಾಜ್ಯಮಟ್ಟದ ‘ಜೀವವೈವಿಧ್ಯ ಪ್ರಶಸ್ತಿ’ ಗರಿ!

1 Min Read

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

2 Mins Read

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

1 Min Read
Recent News

ಸಾಗರದ ನ್ಯಾಯವಾದಿ ಶ್ರಾವ್ಯ ಸಾಗರ್ ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ರಾಜ್ಯಮಟ್ಟದ ‘ಜೀವವೈವಿಧ್ಯ ಪ್ರಶಸ್ತಿ’ ಗರಿ!

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

State News
KARNATAKA

ಸಾಗರದ ನ್ಯಾಯವಾದಿ ಶ್ರಾವ್ಯ ಸಾಗರ್ ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ರಾಜ್ಯಮಟ್ಟದ ‘ಜೀವವೈವಿಧ್ಯ ಪ್ರಶಸ್ತಿ’ ಗರಿ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದ ಯುವ ನ್ಯಾಯವಾದಿ ಶ್ರಾವ್ಯ ಸಾಗರ್ ಅವರು ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ರಾಜ್ಯಮಟ್ಟದ ಪ್ರತಿಷ್ಠಿತ ಜೀವವೈವಿಧ್ಯ ಪ್ರಶಸ್ತಿ ಲಭಿಸಿದೆ.…

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.