ಬೆಂಗಳೂರು: ನಗರದಲ್ಲಿ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಪ್ರಕರಣದಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರಿಂದ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ನೂರುಲ್ಲಾ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಆಲಿ, ಸೈಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ಧಿಕ್, ಕಲೀಂ, ಉಮ್ರೇಜ್ ಸೆರೆ ಹಿಡಿಯಲಾಗಿದೆ.
ಜನವರಿ.12ರಂದು ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಮಾಡಲಾಗಿತ್ತು. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೋರಮಂಗಲ ಠಾಣೆ ರೌಡಿ ಶೀಟರ್ ಶಬ್ಬ್ರೀರ್ ಹತ್ಯೆ ಮಾಡಲಾಗಿತ್ತು.
ಶಬ್ಬೀರ್ ಹತ್ಯೆಯ ಬಳಿಕ ಆರೋಪಿಗಳು ಹೈದರಾಬಾದ್ ಮತ್ತು ಮುಂಬೈಗೆ ತೆರಳಿದ್ದರು. ಬಂಧನಕ್ಕೆ ಬಲೆ ಬೀಸಿದ್ದಂತ ಪೊಲೀಸರು ಕುಟುಂಬಸ್ಥರನ್ನು ಭೇಟಿಯಾಗಲು ರೈಲ್ವೆ ನಿಲ್ದಾಣಕ್ಕೆ ಆರೋಪಿಗಳು ಬಂದಿದ್ದಂತ ವೇಳೆಯಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹೊಡೆದಾಡಿಕೊಂಡ ಕೈದಿಗಳು: ಕಲ್ಲಿನಿಂದ ಜಜ್ಜಿ ಗಾಯ








