ಮೈಸೂರು: ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ ಮೈಸೂರು, ಜಪಾನ್–ಭಾರತ ಸಹಯೋಗದಡಿ ಜಿಕಾ (JICA) ಬೆಂಬಲಿತ IMPACT-VIP ಕಾರ್ಯಕ್ರಮದ ಅಡಿಯಲ್ಲಿ ಇಂದು ಮಹತ್ವದ ಸಭೆಯಲ್ಲಿ ಭಾಗವಹಿಸಿ ಸಚಿವರಾದ ದಿನೇಶ್ ಗುಂಡೂರಾವ್ ಅಂಧರ ಸಮಸ್ಯೆ ಅವರಿಗೆ ಮಾತ್ರ ಸರಿಯಾಗಿ ಅರ್ಥವಾಗಲು ಸಾಧ್ಯ. QR ಕೋಡ್ ಈಗ ಜನಸಾಮಾನ್ಯರು ಉಪಯೋಗಿಸುತ್ತಾರೆ. ಸ್ವಾವಲಂಬಿಯಾಗಿ ಬದುಕಲು ಅಂಧರಿಗೆ ಇದೊಂದು ದಾರಿಯಾಗಲಿದೆ. ಭಾಷಾ ಸಮಸ್ಯೆ ಇರುವವರಿಗೂ ಇದು ವರದಾನವಾಗಲಿದೆ. ಇನ್ನೂ ಹೆಚ್ಚಿನ ಸಂಶೋಧನೆ ಇದರ ಕುರಿತು ನಡೆಯಲಿ. ದೃಷ್ಟಿಹೀನ ವ್ಯಕ್ತಿಗಳು ದಿನನಿತ್ಯದಲ್ಲಿ ಔಷಧಿಗಳನ್ನು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಬಳಸುವಲ್ಲಿ ಎದುರಿಸುವ ಸವಾಲುಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಔಷಧ ಪ್ಯಾಕೆಟ್ ಮೇಲಿನ QR ಕೋಡ್ ಮೂಲಕ ಔಷಧದ ವಿವರಗಳನ್ನು ಪಡೆಯುವ ಈ ತಂತ್ರಜ್ಞಾನದಿಂದ ಹಲವು ಅನುಕೂಲಗಳಿದೆ.
ಫಾರ್ಮಸಿಸ್ಟ್‌ಗಳಾಗಿ ಕೆಲಸ ಮಾಡುವ ಅಂಧರು, ಔಷಧಿ ಲೇಬಲ್‌ಗಳು, ಸೂಚನೆಗಳು ಮತ್ತು ಪ್ಯಾಕೇಜಿಂಗ್‌ನ ಕಾರಣದಿಂದ ಎದುರಿಸುವ ತೊಂದರೆಗಳನ್ನು ಎದುರಿಸುತ್ತಾರೆ. ಈ ತಂತ್ರಜ್ಞಾನ ಅವರ ಸಮಸ್ಯೆಗೆ ಪರಿಹಾರ ನೀಡಲಿದೆ. ಐದು ರಾಜ್ಯಗಳಲ್ಲಿ ಸಂಗ್ರಹಿಸಿದ ಸಂಶೋಧನಾ ಮಾಹಿತಿಯನ್ನು ನೋಡಿದಾಗ ಮತ್ತು ತಂತ್ರಜ್ಞಾನದ ಮೂಲಕ ಔಷಧಿ ಸುರಕ್ಷತೆ ಮತ್ತು ಅಂಧರು ಸ್ವಾವಲಂಬನೆಯನ್ನು ಹೇಗೆ ಸುಧಾರಿಸಬಹುದಾಗಿದೆ ಎಂಬುದು ತಿಳಿಯುತ್ತದೆ. ಅಂಧರ ಅನುಭವಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ನೋಡಿದಾಗ ರಾಜ್ಯ ಮಟ್ಟದಲ್ಲಿ ಇದನ್ನು ಅಳವಡಿಸಬಹುದಾಗಿದೆ.
ಜಪಾನ್‌ನ ಎಕ್ಸ್‌ಪೋರ್ಟ್ ಜಪಾನ್ ಇಂಕ್ ಮತ್ತು ಡೆಲಾಯಿಟ್ ತೊಮಾತ್ಸು ಫೈನಾನ್ಶಿಯಲ್ ಅಡ್ವೈಸರಿ ಪ್ರತಿನಿಧಿಗಳು, ಅಂಧರಿಗೆ ಅನುಕೂಲವಾಗುವ ಮಾಹಿತಿಯ ತಂತ್ರಜ್ಞಾನಗಳು ಔಷಧಿಗಳ ನಿರ್ವಹಣೆಯನ್ನು ಹೇಗೆ ಸುಲಭಗೊಳಿಸಬಹುದು ಎಂಬುದನ್ನು ವಿವರಿಸಿದರು. ಜೆಎಸ್‌ಎಸ್ ಸಂಶೋಧಕರು ಹಾಗೂ ಅಂಧರು ತಮ್ಮ ಅನುಭವಗಳನ್ನು ಹಂಚಿಕೊಂಡರು.
IMPACT-VIP ಯೋಜನೆಯ ಅಡಿಯಲ್ಲಿ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 500ಕ್ಕೂ ಹೆಚ್ಚು ಅಂಧ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.








