ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯನ್ನು ದಿಢೀರ್ ರದ್ದು ಮಾಡಿದ್ದರು. ಅದರ ಹಿಂದಿನ ಕಾರಣವನ್ನು ವೀಡಿಯೋ ಸಹಿತ ಜೆಡಿಎಸ್ ರಿವೀಲ್ ಮಾಡಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್ ಪಕ್ಷವು, ಸಿಎಂ ಕುರ್ಚಿ ಹಿಂದೆ ಬಿದ್ದಿರುವ ಡಿಕೆ ಶಿವಕುಮಾರ್, ಸ್ವಾರ್ಥಕ್ಕಾಗಿ ಮೊದಲೇ ನಿಗದಿಯಾಗಿದ್ದ ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆ ಪ್ರವಾಸವನ್ನೇ ರದ್ದು ಮಾಡಿದ್ದಾರೆ ಎಂದಿದೆ.
ಹೂಡಿಕೆ, ಉದ್ಯೋಗ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುವ ಜಾಗತಿಕ ಆರ್ಥಿಕ ಶೃಂಗಸಭೆಯನ್ನು ನೆರೆಯ ರಾಜ್ಯಗಳ ನಾಯಕರು ವೇದಿಕೆಯನ್ನಾಗಿಸಿಕೊಂಡಿದ್ದಾರೆ ಎಂದು ಹೇಳಿದೆ.
ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕುರ್ಚಿ ಆಸೆಗಾಗಿ ರಾಜ್ಯದ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂಬುದಾಗಿ ಆಕ್ರೋಶ ಹೊರ ಹಾಕಿದೆ.
ಸಿಎಂ ಕುರ್ಚಿ ಹಿಂದೆ ಬಿದ್ದಿರುವ ಡಿಕೆ ಶಿವಕುಮಾರ್, ಸ್ವಾರ್ಥಕ್ಕಾಗಿ ಮೊದಲೇ ನಿಗದಿಯಾಗಿದ್ದ ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆ ಪ್ರವಾಸವನ್ನೇ ರದ್ದು ಮಾಡಿದ್ದಾರೆ.
ಹೂಡಿಕೆ, ಉದ್ಯೋಗ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುವ ಜಾಗತಿಕ ಆರ್ಥಿಕ ಶೃಂಗಸಭೆಯನ್ನು ನೆರೆಯ ರಾಜ್ಯಗಳ ನಾಯಕರು ವೇದಿಕೆಯನ್ನಾಗಿಸಿಕೊಂಡಿದ್ದಾರೆ.
ನಮ್ಮ… pic.twitter.com/kbeOeitGkn
— Janata Dal Secular (@JanataDal_S) January 19, 2026








