ಶಿವಮೊಗ್ಗ: ರಾಜ್ಯದ ಹಲವೆಡೆ ಶನೀಶ್ವರ ದೇವಾಲಯಗಳಿರಬಹುದು. ನೀವುಗಳು ಭೇಟಿ ಕೂಡ ನೀಡಿರಬೇಹುದು. ಆದರೇ ಅದಕ್ಕಿಂತಲೂ ಭಾರೀ ಪವರ್ ಪುಲ್ ದೇವಾಲ ಅನ್ನೋದು ಭಕ್ತರ ನಂಬಿಕೆ. ಇಲ್ಲಿಗೆ ಭೇಟಿ ನೀಡಿ ತಮ್ಮ ಕಷ್ಟ ನಿವಾರಣೆಯ ಕೋರಿಕೆ ಮಾಡಿದ್ರೆ ನಿವಾರಣೆ ಗ್ಯಾರಂಟಿ ಅನ್ನೋದು ಹಲವರ ಮಾತು. ಹಾಗಾದ್ರೆ ಅದೆಲ್ಲಿದೆ? ಏನು ಅದರ ಮಹತಾತ್ಮೆ ಅಂತ ಮುಂದೆ ಓದಿ.
ಹೌದು.. ಹೀಗೊಂದು ಪವರ್ ಪುಲ್ ಶನೇಶ್ವರ ದೇವಾಲಯ ಇರೋದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣಪಗಾರು ಗ್ರಾಮದ ಕಂಚಿಗದ್ದೆಯಲ್ಲಿ. ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯ ಮಾತ್ರ ಸಕಲ ಕಷ್ಟಗಳನ್ನು ನಿವಾರಿಸುವ ಶಕ್ತಿ ದೇವರೆಂದೇ ಪ್ರಸಿದ್ಧಿಯಾಗಿದೆ.
ಭಕ್ತರ ದಂಡೇ ಆಗಮನ
ಇಲ್ಲಿಗೆ ಶಿವಮೊಗ್ಗ, ಸಾಗರ, ಕಾರ್ಗಲ್, ಮಂಗಳೂರು, ಭಟ್ಕಳ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರ ದಂಡೇ ಆಗಮಿಸುತ್ತದೆ. ಶನಿವಾರದಂದು ಇದು ಹೆಚ್ಚೇ ಆಗಿರುತ್ತದೆ. ಭಕ್ತರ ಕಷ್ಟಗಳನ್ನು ಕೇಳುವಂತ ಪೂಜಾರಿ ಬಂಗಾರಪ್ಪನವರು, ಹೇಳಿಕೆಯ ಮೂಲಕ ಪರಿಹಾರವನ್ನು ಸೂಚಿಸೋದು ಮಾತ್ರ ವಿಶಿಷ್ಟದಲ್ಲಿ ವಿಶಿಷ್ಟವಾಗಿದೆ.
ಏನೆಲ್ಲ ಸಮಸ್ಯೆಗಳ ನಿವಾರಣೆಗೆ ಹರಕೆ ಹೊತ್ತು ಬರ್ತಾರೆ ಗೊತ್ತಾ?
ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯದಲ್ಲಿ ಒಂದಲ್ಲ, ಎರಡಲ್ಲ ಹತ್ತಾರು ಬಗೆಯ ಕಷ್ಟಗಳನ್ನು ಹೇಳಿಕೊಂಡು ಪರಿಹಾರಿಸುವಂತೆ ಭಕ್ತರು ಆಗಮಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸ, ಮನೆಯ ಸಮಸ್ಯೆ, ಹಣಕಾಸಿನ ಸಮಸ್ಯೆ ನಿವಾರಣೆಯನ್ನೂ ನಿವಾರಿಸುವಂತೆ ಕೋರುತ್ತಾರೆ.
ಇದಷ್ಟೇ ಅಲ್ಲದೇ ಉದ್ಯೋಗ, ಮಾತು ಕೇಳದ ಮಗನನ್ನು ಕೇಳುವಂತೆ ಮಾಡು, ಮಕ್ಕಳಾಗದವರಿಗೆ ಸಂತಾನ ಪ್ರಾಪ್ತಿ ಮಾಡುವಂತೆ, ಅನಾರೋಗ್ಯ ಸಮಸ್ಯೆ ನಿವಾರಿಸುವುದು ಸೇರಿದಂತೆ ವಿವಿಧ ಕಷ್ಟಗಳನ್ನು ಪರಿಹರಿಸುವಂತೆ ಕೇಳಿಕೊಂಡು ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸುತ್ತದೆ.

ಭಕ್ತರ ಸಮಸ್ಯೆ ಪರಿಹಾರ ಗ್ಯಾರಂಟಿ
ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಾಲಯಕ್ಕೆ ಹರಕೆ ಹೇಳಿಕೊಂಡು ಬರೋ ಭಕ್ತರ ಕಷ್ಟಗಳು ಪರಿಹಾರವಾಗಿದೆಯಂತೆ. ಇಲ್ಲಿಗೆ ಬಂದಂತ ತಾಯಿಯೊಬ್ಬಳು ಪುತ್ರಿಗೆ ಸರ್ಕಾರಿ ಉದ್ಯೋಗ ಸಿಗಲಿ ಎಂದು ಹರಕೆ ಮಾಡಿಕೊಂಡಂತೆ, ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ ಎಂಬುದು ತಾಯಿಯೊಬ್ಬಳ ಮಾತಾಗಿದೆ.
ತಾನು ಅನಾರೋಗ್ಯ ಪೀಡಿತನಾಗಿ ಅನೇಕ ವರ್ಷಗಳ ಕಾಲ ಬಳಲುತ್ತಿದ್ದೆ. ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಾಲಯಕ್ಕೆ ಬಂದು ಉರುಳು ಸೇವೆ ಮಾಡಿದೆ. ಹತ್ತಾರು ಖ್ಯಾತ ಆಸ್ಪತ್ರೆಗಳಿಗೆ ಹೋಗಿ ವಾಸಿಯಾಗದಂತ ನನ್ನ ಖಾಯಿಲೆ ನಿವಾರಣೆಯಾಗಿದೆ. ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ ಎಂಬುದು ಮತ್ತೊಬ್ಬ ಭಕ್ತರ ಮಾತು.
ಇನ್ನೂ ಇದೇ ದೇವಸ್ಥಾನದಲ್ಲಿ ಹಲವು ದಿನಗಳಿಂದ ಸೇವೆಗೈಯುತ್ತಾ ಬಂದಿರೋ ಭಕ್ತರೊಬ್ಬರು ಮಾತ್ರ ತನ್ನ ಮಾನಸಿಕ ಸಮಸ್ಯೆ ನಿವಾರಿಸಿದಂತ ಶನೀಶ್ವರನಿಗೆ ಜೀವನವನ್ನೇ ಮುಡುಪಾಗಿ ಇಟ್ಟಿದ್ದೇನೆ. ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದೂ, ಮುಂದೆಯೂ ಸಲ್ಲಿಸುತ್ತೇನೆ ಅಂತಾರೆ.
ಶನೀಶ್ವರ ದೇವರ ಪಲ್ಲಕ್ಕಿ ಸಮಸ್ಯೆ ನಿವಾರಿಸುವ ಗಣಿಯಂತೆ
ಶ್ರೀ ಶನೀಶ್ವರ ದೇವರ ಪಲ್ಲಕ್ಕಿಯಂತೂ ಭಟ್ಕಳ ಸೇರಿದಂತೆ ವಿವಿಧ ಭಾಗಗಳಿಗೆ ಉತ್ಸವಕ್ಕೆ ಹೋಗುತ್ತದೆ. ಅದು ಕಷ್ಟ ಹೇಳಿಕೊಂಡು ನಿವಾರಿಸುವಂತೆ ಕೋರುವಂತ ಭಕ್ತರ ಮನೆಗೆ ತೆರಳಿ, ಪರಿಹರಿಸುವ ಕೆಲಸ ಮಾಡುತ್ತಿದೆಯಂತೆ. ಒಮ್ಮೆ ಪಲ್ಲಕ್ಕಿ ದೇವಾಲಯದಿಂದ ಉತ್ಸವದೊಂದಿಗೆ ಹೊರಟರೇ ವಾರಗಟ್ಟಲೇ ಭಕ್ತರ ಕಷ್ಟಗಳನ್ನು ಕೇಳಿ, ನಿವಾರಿಸುವ ಕಾಯಕಕ್ಕೆ ಇಳಿಯಲಿದೆ ಎಂಬುದಾಗಿ ಹೇಳುತ್ತಾರೆ ದೇವಾಲಯದ ಟ್ರಸ್ಟಿ ಮಹೇಶ್.
ಒಟ್ಟಾರೆಯಾಗಿ ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಸ್ಥಾನವು ರಾಜ್ಯದಲ್ಲೊಂದು ಪವರ್ ಪುಲ್ ಶನೇಶ್ವರ ದೇವಾಲಯ ಎಂಬುದಾಗಿಯೇ ನೂರಾರು ಭಕ್ತರ ನಂಬಿಕೆ. ಈ ಹಿನ್ನಲೆಯಲ್ಲೇ ದೇವಾಲಯಕ್ಕೆ ಭಕ್ತರು ಭೇಟಿಯಾಗಿ, ತನ್ನ ಕಷ್ಟಗಳನ್ನು ಪರಿಹರಿಸುವಂತೆ ಹರಕೆ ಹೊತ್ತು ಆಗಮಿಸುತ್ತಾರೆ. ಅವರ ಕಷ್ಟವನ್ನು ಆಲಿಸುವಂತ ಶನೀಶ್ವರ, ಪರಿಹರಿಸಿದ್ದಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ನೀವು ಒಮ್ಮೆ ಹೋಗಿ ಬನ್ನಿ.. ಹೆಚ್ಚಿನ ಮಾಹಿತಿಗಾಗಿ ಬಂಗಾರಪ್ಪ- 9482203253, ಮಹೇಶ್ – 6363540181, 9480766336 ಗೆ ಸಂಪರ್ಕಿಸಿ ಪಡೆಯಬಹುದಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ., ಸಂಪಾದಕರು.








