ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ಕೋಟ್ಯಂತರ ಹಣ ವಂಚನೆ ಮಾಡಿರುವಂತ ಘಟನೆ ನಗರದಲ್ಲಿ ನಡೆದಿದೆ. ಮ್ಯಾಟ್ರಿಮೋನಿಯಲ್ಲಿ ವಿವಾಹಕ್ಕಾಗಿ ಹುಡುಗರನ್ನು ಹುಡುಕೋ ಮುನ್ನಾ ಯುವತಿಯರೇ ಮುಂದೆ ಸುದ್ದಿ ಓದಿ..
ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಕೋಟ್ಯಂತರ ವಂಚನೆ ಮಾಡಿರೋದಾಗಿ ಹೇಳಲಾಗುತ್ತಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವಂತ ಯುವತಿಯೇ ವಂಚನೆಗೆ ಒಳಗಾಗಿರುವಂತವಳು.
ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಆರೋಪಿ ವಿಜಯ್ ರಾಜುಗೌಡನೇ ಈ ರೀತಿಯಾಗಿ ವಂಚನೆ ಮಾಡಿರೋದಾಗಿ ಯುವತಿ ಆರೋಪಿಸಿದ್ದಾರೆ. 2024ರ ಮಾರ್ಚ್ ನಲ್ಲಿ ವಿಜಯ್ ಮ್ಯಾಟ್ರಿಮೋನಿ ಮೂಲಕ ಯುವತಿಗೆ ಪರಿಚಯವಾಗಿದ್ದರು. ಆ ಸಂದರ್ಭದಲ್ಲಿ ತಾನು ಉದ್ಯಮಿ, 715 ಕೋಟಿ ಮೌಲ್ಯದ ಆಸ್ತಿ ಒಡೆಯನೆಂಬುದಾಗಿ ಯುವತಿಗೆ ಪರಿಚಯಿಸಿಕೊಂಡಿದ್ದನು.
ಯುವತಿಯನ್ನು ನಿನ್ನನ್ನೇ ಮದುವೆಯಾಗುವುದಾಗಿ ವಿಜಯ್ ಕುಟುಂಬಸ್ಥರಿಗೂ ಪರಿಚಯಿಸಿದ್ದನು. ಕೆಂಗೇರಿ ಬಳಿ ಯುವತಿಗೆ ಕುಟುಂಬದ ಸದಸ್ಯರನ್ನು ಪರಿಚಯಿಸಿದ್ದನು. ತಂದೆ ನಿವೃತ್ತ ತಹಶೀಲ್ದಾರ್ ಎಂಬುದಾಗಿಯೂ ವಿಜಯ್ ಯುವತಿಗೆ ಪರಿಚಯಿಸಿದ್ದನು.
ಶಾಕಿಂಗ್ ಎನ್ನುವಂತೆ ವಿಜಯ್ ತನ್ನ ಪತ್ನಿಯನ್ನೂ ಮನೆಯಲ್ಲಿ ಅಕ್ಕ ಎಂಬುದಾಗಿ ಯುವತಿಗೆ ಪರಿಚಯಿಸಿದ್ದನಂತೆ. ನಂತರ ಆಸ್ತಿ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿ ಕೇಸ್ ಆಗಿದೆ. ಅಕೌಂಟ್ ಪ್ರಾಬ್ಲಂ ಆಗಿದೆ ಎಂಬುದಾಗಿ ಹೇಳಿ ಯುವತಿಯನ್ನು ನಂಬಿಸಿ ಹಣ ಪೀಕಿದ್ದಾನೆ. ಇದಕ್ಕಾಗಿ ಕೋರ್ಟ್ ದಾಖಲೆ ಸೇರಿದಂತೆ ಇತರೆ ದಾಖಲೆಗಳನ್ನು ಯುವತಿಗೆ ವಿಜಯ್ ತೋರಿಸಿದ್ದಾನೆ.
ಹಣದ ಅವಶ್ಯಕತೆ ಇದೆ ಎಂಬುದಾಗಿ 15,000 ಹಣ ಪಡೆದಿದ್ದಂತ ಆರೋಪಿ ಆ ಬಳಿಕ, ತಾವಿಬ್ಬರೂ ಸೇರಿ ಬ್ಯುಸಿನೆಸ್ ಮಾಡೋಣ ಎಂಬುದಾಗಿ ಲೋನ್ ತೆಗೆಸಿದ್ದಾನೆ. ಹಂತ ಹಂತವಾಗಿ ಯುವತಿಯಿಂದ ಬರೋಬ್ಬರಿ 1.75 ಕೋಟಿ ಹಣವನ್ನು ವಂಚಕ ವಿಜಯ್ ಪಡೆದಿದ್ದಾಗಿ ಯುವತಿಯು ಆರೋಪಿಸಿದ್ದಾಳೆ.
ಯುವತಿ ಸಂಬಂಧಿಕರು, ಸ್ನೇಹಿತರಿಂದ ಲಕ್ಷ ಲಕ್ಷ ಹಣವನ್ನು ಪಡೆದು, ವಂಚಕ ವಿಜಯ್ ಗೆ ನೀಡಿದ್ದಳು. 22 ಲಕ್ಷ ಹಣ ವಾಪಾಸ್ ಕೊಟ್ಟು ಉಳಿದ ಹಣ ನೀಡಲು ಹಿಂದೇಟು ಹಾಕಿದ್ದನು. ಹಣ ವಾಪಾಸ್ಸು ಕೇಳೋದಕ್ಕೆ ಯುವತಿ ಹೋಗಾದ ವಿಜಯ್ ನಿಜವಾದ ಬಣ್ಣ ಬಯಲಾಗಿತ್ತು. ಮದುವೆಯಾಗಿ ಮಗು ಇರುವ ವಿಚಾರವೂ ತಿಳಿದು ಬಂದಿದೆ.
ಹಣ ಕೇಳಿದ್ದಕ್ಕೆ ಯುವತಿ, ಸ್ನೇಹಿತರಿಗೆ ವಿಜಯ್ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಫೈಟ್ ಫೀಲ್ಡ್ ಪೊಲೀಸ್ ಠಾಣೆಗೆ ತೆರಳಿ ಯುವತಿ ವಿಜಯ್ ವಿರುದ್ಧ ದೂರು ನೀಡಿದ್ದಾಳೆ. ವಿಜಯ್ ರಾಜುಗೌಡ, ಬೋರೇಗೌಡ, ಸೌಮ್ಯ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಯನ್ನು ವೈಟ್ ಫೀಲ್ಡ್ ಪೊಲೀಸರು ಮಾಡಿದ್ದಾರೆ.
ಈ ಬಾರಿ ಗಿಲ್ಲಿ ನಟ ಗೆಲ್ಲೋದು ಫಿಕ್ಸ್: ಬಿಗ್ ಬಾಸ್ 11 ವಿನ್ನರ್ ಹನುಮಂತು ಭವಿಷ್ಯ








