ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಉತ್ತಮ, ವಿಶೇಷವಾಗಿ ಕಟ್ಟುನಿಟ್ಟಾದ ಆಹಾರ ನಿಯಮಗಳು, ಕ್ಯಾಲೋರಿ ಎಣಿಕೆ ಮತ್ತು ನಿರಂತರ ಗ್ಲೂಕೋಸ್ ಮೇಲ್ವಿಚಾರಣೆ ಮಾಡಬೇಕು.
ಯಾವುದೇ ಡಯಟ್ ಬದಲಾವಣೆ ಇಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸಲು ವೈದ್ಯರು ಸೂಚಿಸಿದ 10 ನಿಮಿಷದ ಸರಳ ಅಭ್ಯಾಸ
AIIMS, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ (ಜೀರ್ಣಾಂಗವ್ಯೂಹ ತಜ್ಞ) ಡಾ. ಸೌರಭ್ ಸೇಠಿ ಅವರ ಪ್ರಕಾರ, ನೀವು ತಿನ್ನುವ ಆಹಾರದಲ್ಲಿ ಸಂಪೂರ್ಣ ಬದಲಾವಣೆ ಮಾಡದೆಯೇ, ಜೀವನಶೈಲಿಯಲ್ಲಿನ ಒಂದು ಸಣ್ಣ ಮತ್ತು ನಿರಂತರ ಅಭ್ಯಾಸವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಲ್ಲದು.
ಜನವರಿ 15 ರಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಡಾ. ಸೇಠಿ ಅವರು, ನೈಸರ್ಗಿಕವಾಗಿ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಮೆಟಬಾಲಿಕ್ (ಚಯಾಪಚಯ) ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಸರಳ ಹಾಗೂ ಪರಿಣಾಮಕಾರಿ ಅಭ್ಯಾಸವನ್ನು ಹಂಚಿಕೊಂಡಿದ್ದಾರೆ.
ಸರಳ ಅಭ್ಯಾಸವೊಂದು ರಕ್ತದ ಸಕ್ಕರೆಯನ್ನು ನಿಜಕ್ಕೂ ನಿಯಂತ್ರಿಸಬಲ್ಲದೇ?
“ಬ್ಲಡ್ ಶುಗರ್ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಆಹಾರ ಪದ್ಧತಿಯ ಅಗತ್ಯವಿದೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ,” ಎಂದು ಡಾ. ಸೇಠಿ ಹೇಳುತ್ತಾರೆ. “ಆದರೆ ಕೇವಲ ಒಂದು ಸರಳ ಅಭ್ಯಾಸವು ಆಹಾರದ ಬದಲಾವಣೆಯಷ್ಟೇ ಪರಿಣಾಮಕಾರಿಯಾಗಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.”
ಅವರ ಪ್ರಕಾರ, ಈ ಅಭ್ಯಾಸವು ಈ ಕೆಳಗಿನ ಸಮಸ್ಯೆ ಎದುರಿಸುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ:
ಪ್ರಿ-ಡಯಾಬಿಟಿಸ್ (ಮಧುಮೇಹದ ಪೂರ್ವ ಹಂತ)
ಟೈಪ್ 2 ಡಯಾಬಿಟಿಸ್
ಫ್ಯಾಟಿ ಲಿವರ್ (ಪಿತ್ತಜನಕಾಂಗದಲ್ಲಿ ಕೊಬ್ಬು ಸೇರುವುದು)
ಇನ್ಸುಲಿನ್ ರೆಸಿಸ್ಟೆನ್ಸ್
ತೂಕ ಹೆಚ್ಚಳ ಮತ್ತು ಹೊಟ್ಟೆಯ ಕೊಬ್ಬು (Belly fat)
ಸಕ್ಕರೆ ತಿನ್ನುವ ಹಂಬಲ (Sugar cravings)
ಅನುಸರಿಸಲು ಸುಲಭವಾದ ಅಭ್ಯಾಸ ಯಾವುದು?
ಇದಕ್ಕೆ ಡಾ. ಸೇಠಿ ಸೂಚಿಸುವ ಪರಿಹಾರ ಆಶ್ಚರ್ಯಕರವಾಗಿ ಸರಳವಾಗಿದೆ:
“ಊಟದ ನಂತರ 10 ನಿಮಿಷಗಳ ಕಾಲ ನಡಿಗೆ. ಹೌದು, ಕೇವಲ ನಡಿಗೆ.”
ಅವರು ವಿವರಿಸುವಂತೆ, ನೀವು ಊಟದ ನಂತರ ನಡೆದಾಗ ನಿಮ್ಮ ಕಾಲುಗಳ ಸ್ನಾಯುಗಳು ‘ಸ್ಪಂಜ್’ನಂತೆ ಕೆಲಸ ಮಾಡುತ್ತವೆ. ಸ್ನಾಯುಗಳು ಚಲಿಸಿದಾಗ ಅವು ರಕ್ತಪ್ರವಾಹದಿಂದ ಗ್ಲೂಕೋಸ್ ಅನ್ನು ನೇರವಾಗಿ ಹೀರಲ್ಪಡುತ್ತವೆ. ಇದರಿಂದ ರಕ್ತದಲ್ಲಿ ಹರಿಯುವ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ.
“ರಕ್ತದಲ್ಲಿ ಗ್ಲೂಕೋಸ್ ಕಡಿಮೆಯಾದಷ್ಟೂ ಇನ್ಸುಲಿನ್ ಬಿಡುಗಡೆಯೂ ಕಡಿಮೆಯಾಗುತ್ತದೆ. ಕಡಿಮೆ ಇನ್ಸುಲಿನ್ ಎಂದರೆ ಲಿವರ್‌ಗೆ (ಯಕೃತ್ತು) ಕಳುಹಿಸುವ ಕೊಬ್ಬಿನ ಪ್ರಮಾಣವೂ ಕಡಿಮೆ ಎಂದರ್ಥ. ಇದು ಮುಖ್ಯವಾಗಿ ಫ್ಯಾಟಿ ಲಿವರ್ ಸಮಸ್ಯೆ ಇರುವವರಿಗೆ ಬಹಳ ಮುಖ್ಯ,” ಎನ್ನುತ್ತಾರೆ ಡಾ. ಸೇಠಿ.
ಊಟದ ನಂತರ ನಡೆಯುವುದರಿಂದ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳು:
ಈ ಸರಳ ಅಭ್ಯಾಸದಿಂದ ಹಲವಾರು ಸುಧಾರಣೆಗಳನ್ನು ಕಾಣಬಹುದು ಎಂದು ಡಾ. ಸೇಠಿ ಗಮನಿಸಿದ್ದಾರೆ:
ರಕ್ತದಲ್ಲಿ ಸಕ್ಕರೆ ಮಟ್ಟ ಒಮ್ಮೆಲೇ ಏರಿಕೆಯಾಗುವುದು ತಪ್ಪುತ್ತದೆ
ಇನ್ಸುಲಿನ್ ಮಟ್ಟ ಕಡಿಮೆಯಾಗುತ್ತದೆ.
ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗುವುದು ಕಡಿಮೆಯಾಗುತ್ತದೆ.
ಹೊಟ್ಟೆಯ ಸುತ್ತಲಿನ ಕೊಬ್ಬು ತಗ್ಗುತ್ತದೆ.
ಸಕ್ಕರೆ ಮಟ್ಟ ಕುಸಿಯುವುದು (Sugar crashes) ಕಡಿಮೆಯಾಗುತ್ತದೆ.
ದಿನವಿಡೀ ಸ್ಥಿರವಾದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು.
ಮುಖ್ಯವಾಗಿ, ಇದಕ್ಕೆ ಯಾವುದೇ ಕಠಿಣ ವ್ಯಾಯಾಮದ ಅಗತ್ಯವಿಲ್ಲ ಎಂದು ಅವರು ಒತ್ತಿ ಹೇಳುತ್ತಾರೆ. “ನೀವು ವೇಗವಾಗಿ ನಡೆಯಬೇಕಿಲ್ಲ, ಸ್ಟೆಪ್ ಗೋಲ್ ಇಟ್ಟುಕೊಳ್ಳಬೇಕಿಲ್ಲ ಅಥವಾ ನಿರ್ದಿಷ್ಟ ವ್ಯಾಯಾಮದ ಅಗತ್ಯವಿಲ್ಲ. ನಿಮ್ಮ ಮನೆಯ ಒಳಗಡೆ ಸುಮ್ಮನೆ ಅಡ್ಡಾಡುವುದೂ ಸಹ ಪ್ರಯೋಜನಕಾರಿ,” ಎನ್ನುತ್ತಾರೆ ಅವರು.
ಕಠಿಣತೆಯ ಬದಲಾಗಿ ನಿರಂತರತೆ (Consistency) ಮುಖ್ಯ ಎಂದು ಡಾ. ಸೇಠಿ ಸೇರಿಸುತ್ತಾರೆ.








