ಬೆಂಗಳೂರು: ಬಿ.ಜೆ.ಪಿ ಯ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಾ, ತಾವು ಅಖಂಡ ಪಾಂಡಿತ್ಯವನ್ನು ಪ್ರದರ್ಶಿಸುತ್ತಿರುವುದಾಗಿ ಭ್ರಮೆಯಲ್ಲಿರುವ, ತಮ್ಮ ದುರಾಡಳಿತದ ವರದಿಯನ್ನೇ ಜಗಜಾಹ್ಹೀರು ಮಾಡಿಕೊಳ್ಳುತ್ತಿರುವ ಮಹಾನ್ ದಡ್ಡರೇ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಾಗ್ಧಾಳಿ ನಡೆಸಿದ್ದಾರೆ.
ಇಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ದಿನಪತ್ರಿಕೆಯ ಹೆಡ್ ಲೈನ್ ನೋಡಿ, ಅದನ್ನೇ ವರದಿಯ ಸಾರಾಂಶವೆಂದು ತಿಳಿದು ಟ್ಟೀಟ್ ಮಾಡುವ ಅಜ್ಞಾನಿಗಳಿಗೆ ಏನೆಂದು ಹೇಳಬೇಕೋ ತಿಳಿಯದಾಗಿದೆ ಎಂದು ಹೇಳಿದ್ದಾರೆ.
ದಿನಪತ್ರಿಕೆ ವರದಿಯ ತುಣಕನ್ನು ಅಡಕಗೊಳಿಸಿದ್ದು, ಅದರಲ್ಲಿ ತಮ್ಮ ಅಧಿಕಾರಾವಧಿಯ ಕರ್ಮಕಾಂಡವನ್ನು ಬರೆದಿದ್ದಾರೆ ಓದಿ ಅರ್ಥಮಾಡಿಕೊಳ್ಳಿ. ಅರ್ಥವಾಗದಿದ್ದರೆ ದಿನಪತ್ರಿಕೆ ಓದಿ ಅರ್ಥ ತಿಳಿಸುವಂತೆ ಟ್ಟೀಟ್ ಮೂಲಕ ಜಾಹೀರಾತು ನೀಡಿ ಎಂದಿದ್ದಾರೆ.
✅ ಬಿ.ಜೆ.ಪಿಯ ಅವಧಿಯಲ್ಲಿ 2020 ರಲ್ಲಿ ವೇತನ ಪರಿಷ್ಕರಣೆ ಮಾಡಬೇಕಾಗಿದ್ದನ್ನು 2023 ರಲ್ಲಿ ಮಾಡಲಾಗಿದೆ ಅದರ ಕೀರ್ತಿ ತಮ್ಮದು.
✅ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ 38 ತಿಂಗಳುಗಳ ಬಾಕಿ ಹಣ ಪಾವತಿ ಮಾಡದೇ, ಅದಕ್ಕಾಗಿ ಯಾವುದೇ ಹಣ ಮೀಸಲಿರಿಸದೆ ಸಾರಿಗೆ ನೌಕರರನ್ನು ಬೀದಿಗೆ ತಂದು ಅವರು ಮುಷ್ಕರವನ್ನು ಮಾಡುವ ಹಂತಕ್ಕೆ ತಂದಿರುವ ಕೀರ್ತಿ ತಮ್ಮದು.
✅ ನಿವೃತ್ತಿ ಹೊಂದಿದ ನೌಕರರಿಗೂ ಸಹ ವೇತನ ಪರಿಷ್ಕರಣೆ ಮೊತ್ತವನ್ನು ಪಾವತಿಸದೆ ಹೋಗಿ, ಅವರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ರೂ.224 ಕೋಟಿ ಪಾವತಿಸಿದ್ದೇವೆ.
✅ ತಮ್ಮ ಆಡಳಿತದ ಅವಧಿಯ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಗಾಗಿ ರೂ. 2000 ಕೋಟಿ ಸಾಲದ ಅಸಲು ಮತ್ತು ಬಡ್ಡಿಯನ್ನು ನಿಗಮಗಳ ಪರವಾಗಿ ನಮ್ಮ ಸರ್ಕಾರ ಪಾವತಿಸುತ್ತಿದೆ.
✅ ತಮ್ಮ ಅವಧಿಯ ದುರಾಡಳಿತದ ಪರಮಾವಧಿ ಎಷ್ಟಿದೆ ಎಂದರೆ ,ಸಾರಿಗೆ ನಿಗಮಗಳನ್ನು ತಹಬದಿಗೆ ತರಲು ಸರಿಸುಮಾರು ಹತ್ತು ವರ್ಷಗಳಾದರೂ ಬೇಕು ಇದರ ಕೀರ್ತಿ ಕೂಡ ತಮ್ಮದೇ.
✅ ಸಾರಿಗೆ ನೌಕರರ ಬದುಕನ್ನು ನರಕ ಮಾಡಿ ಹೋದ ಕೀರ್ತಿಗೂ ಸಹ ತಾವೇ ಭಾಜನರು ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
BREAKING: ಧರ್ಮಸ್ಥಳ ಕೇಸ್: ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತ ವಿಠಲ್ ಗೌಡಗೆ 30 ದಿನ ಕಾರಾಗೃಹ ಶಿಕ್ಷೆ








