ಬೆಂಗಳೂರು: ಕೃಷಿ ಇಲಾಖೆ ವತಿಯಿಂದ 2025-26 ನೇ ಸಾಲಿನ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಅಭಿಯಾನ ಯೋಜನೆಯಡಿ ಬೆಂಗಳೂರು ನಗರ ಜಿಲ್ಲಾ ಮಟ್ಟದ (ಆನೇಕಲ್ & ಬೆಂಗಳೂರು ಉತ್ತರ ತಾಲ್ಲೂಕು) ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯು ಜನವರಿ 21, 2026 ರಂದು ನಡೆಯಲಿದ್ದು, ರೈತರು ಮತ್ತು ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರತಿ ಸ್ಪರ್ಧಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಒಂದೇ ತಿನಿಸು (ಸಸ್ಯಹಾರಿ ತಿನಿಸುಗಳು ಮಾತ್ರ) ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳ ತಿಸಿಸು ಮಾಡಲು ಅವಕಾಶವಿರುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವರು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯದ ಹೆಸರಿನೊಂದಿಗೆ ಜನವರಿ 18, 2026ರೊಳಗೆ ಇ-ಮೇಲ್ : jdablr14@gmail.com ಗೆ ಕಳುಹಿಸಬಹುದು .
ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿ ಜನವರಿ 21, 2026 ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಕೃಷಿ ಸಂಕೀರ್ಣ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಬನಶಂಕರಿ, ಸಬ್ ರಿಜಿಸ್ಟ್ರಾರ್ ಕಚೇರಿ ಹತ್ತಿರ, ಕನಕಪುರ ರಸ್ತೆ, ಬೆಂಗಳೂರು ಇಲ್ಲಿ ಪ್ರದರ್ಶಿಸಬಹುದಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೀಪ ಮೊಬೈಲ್ ಸಂಖ್ಯೆ 8197223906, 9632862326, & 8277929920 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Health Tips: ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟಿದು: ಈ ದಿನಚರಿ ಪಾಲಿಸಿದ್ರೆ ಕಾಯಿಲೆ ದೂರ ಗ್ಯಾರಂಟಿ








