ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಹಿಟ್&ರನ್ ಗೆ ಮೂವರು ಬಲಿಯಾಗಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಹಿಟ್ & ರನ್ ಗೆ ಮೂವರು ಯುವಕರು ಬಲಿಯಾಗಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಅಪಘಾತದ ನಂತರ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ.
ಬೈಕ್ ಸವಾರ ತೌಸಿಫ್ ಸೇರಿದಂತೆ ಮೂವರು ಸವಾರರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಬೈಕಿಗೆ ಡಿಕ್ಕಿ ಹೊಡಿಸಿ ಟಿಪ್ಪರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ದೇವನಹಳ್ಳಿಯಿಂದ ಬೂದಿಗೆರೆ ರಸ್ತೆಯಲ್ಲಿ ಸವರರು ತೆರಳುತ್ತಿದ್ದರು. ಅದು ವೇಗವಾಗಿ ಬಂದು ಟಿಪ್ಪರ್ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಮೂವರ ತಲೆಗಳು ಸಂಪೂರ್ಣ ಛಿದ್ರ ಛಿದ್ರವಾಗಿವೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಟಿಪ್ಪರ್ ಚಾಲಕನಿಗಾಗಿ ಶೋಧ ಮುಂದುವರಿಸಿದ್ದಾರೆ.








