ಬೆಂಗಳೂರು: ಸಾರಿಗೆ ನೌಕರರ ಬಗ್ಗೆ ಮಾತನಾಡಿದಂತ ಬಿಜೆಪಿಗರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಖಡಕ್ ತಿರುಗೇಟು ನೀಡಿದ್ದಾರೆ. ಬಿಜೆಪಿಗರೇ ಈ ಎಲ್ಲವನ್ನೂ ಮರೆತು ಬಿಟ್ಟಿರಾ? ಸಾರಿಗೆ ನೌಕರರ ಬಗ್ಗೆ ಕಾಳಜಿವಹಿಸದೆ ಈಗ ಟ್ವೀಟ್ ಮೂಲಕ ಕಾಳಜಿವಹಿಸುವ ನಾಟಕ ಆಡಲು ತಮಗೆ ನಾಚಿಕೆಯಾಗುವುದಿಲ್ಲವೇ? ಎಂಬುದಾಗಿ ಕಿಡಿಕಾರಿದ್ದಾರೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ವೇತನ ಪರಿಷ್ಕರಣೆ ಸಂಬಂಧ ಮೊದಲ ಬಾರಿಗೆ ಮುಷ್ಕರ ಮಾಡಿದ್ದು ನಿಮ್ಮ ಬಿ.ಜೆ.ಪಿ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ? ತಮ್ಮ ಬಿ.ಜೆ.ಪಿ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ವೇತನಕ್ಕಾಗಿ 15 ದಿವಸಗಳ ಸುದೀರ್ಘ ಮುಷ್ಕರ ನಡೆದಿದ್ದು ಮರೆತು ಬಿಟ್ಟಿರಾ? ಎಂದು ಕೇಳಿದ್ದಾರೆ.
ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು 3000 ನೌಕರರ ವಜಾ/ ಅಮಾನತು/ ವರ್ಗಾವಣೆ ಮಾಡಿ ಹಲವು ಸಿಬ್ಬಂದಿಗಳ ಮೇಲೆ FIR ಹಾಕಿಸಿ, ಇಂದಿಗೂ ಕೋರ್ಟ್/ಕಛೇರಿ ಅಂತ ಅಲೆಯುತ್ತಿದ್ದಾರೆ ಅದನ್ನು ಮರೆತು ಬಿಟ್ಟಿರಾ? ಬಿ.ಜೆ.ಪಿಯ ಅವಧಿಯಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ 38 ತಿಂಗಳುಗಳ ಬಾಕಿ ಹಣ ಪಾವತಿ ಮಾಡದೇ, ಅದಕ್ಕಾಗಿ ಯಾವುದೇ ಹಣ ಮೀಸಲಿರಿಸದೆ ಸಾರಿಗೆ ನೌಕರರನ್ನು ಬೀದಿಗೆ ತಂದು ಅವರು ಮುಷ್ಕರವನ್ನು ಮಾಡುವ ಹಂತಕ್ಕೆ ತಂದಿರುವ ತಮ್ಮ ಬಿ.ಜೆ.ಪಿ ಯ ಆಡಳಿತ ಅದನ್ನು ಮರೆತು ಬಿಟ್ಟಿರಾ? ಎಂದು ಪ್ರಶ್ನಿಸಿದ್ದಾರೆ.
2023 ರಲ್ಲಿ ವೇತನ ಹೆಚ್ಚಳ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ನೀಡದೆ ಹೋಗಿದ್ದು ತಾವು ಎಂಬುದನ್ನು ಮರೆತು ಬಿಟ್ಟಿರಾ ? ನಿವೃತ್ತ ನೌಕರರಿಗೆ ನೀವು ಪಾವತಿ ಮಾಡದೇ ಹೋಗಿದ್ದ ರೂ.224 ಕೋಟಿ ಹಣವನ್ನು ನಾವು ನಿವೃತ್ತ ನೌಕರರಿಗೆ ಪಾವತಿ ಮಾಡಿದ್ದೇವೆ. ಯಾವ ಮುಖ ಇಟ್ಟುಕೊಂಡು ನಿವೃತ್ತಿ ಹೊಂದಿದ ನೌಕರರ ಬಗ್ಗೆ ಟ್ಟೀಟ್ ಮಾಡುತ್ತೀರಾ ? ಎಂದಿದ್ದಾರೆ.
ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಬೆಳೆಸುವ ಯಾವುದೇ ಒಂದೇ ಒಂದು ಉಪಕ್ರಮ ತಿಳಿಸಿ ನೋಡೋಣ ? ಶೂನ್ಯ ನೇಮಕಾತಿ, ಹೊಸ ಬಸ್ಸುಗಳ ಸೇರ್ಪಡೆ ಇಲ್ಲ, ಡಕೋಟಾ ಬಸ್ಸುಗಳು, ನೌಕರರಿಗೆ ಅರ್ಧ ವೇತನ/ ಕೆಲವೊಮ್ಮೆ ಈ ತಿಂಗಳ ವೇತನ ಮುಂದಿನ ತಿಂಗಳು, ಹೀಗೆ ಹತ್ತು ಹಲವು ತಮ್ಮ ದುರಾಡಳಿತದ ಉದಾಹರಣೆಗಳು ಎಂಬುದಾಗಿ ಹೇಳಿದ್ದಾರೆ.
ನಮ್ಮ ಕಾಲದಲ್ಲಿ ಬರೋಬ್ಬರಿ 10000 ನೇಮಕಾತಿ, 7800 ಹೊಸ ಬಸ್ಸುಗಳು, ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದು ಪೂರ್ತಿ ಸಂಬಳ ಪಾವತಿ, ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಮ್ಮದಾಗಿದೆ. ಆದರೆ ತಾವು ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರ ಬಗ್ಗೆ ಕಾಳಜಿವಹಿಸದೆ ಈಗ ಟ್ವೀಟ್ ಮೂಲಕ ಕಾಳಜಿವಹಿಸುವ ನಾಟಕ ಆಡಲು ತಮಗೆ ನಾಚಿಕೆಯಾಗುವುದಿಲ್ಲವೇ? ಎಂಬುದಾಗಿ ಗುಡುಗಿದ್ದಾರೆ.
✅ ವೇತನ ಪರಿಷ್ಕರಣೆ ಸಂಬಂಧ ಮೊದಲ ಬಾರಿಗೆ ಮುಷ್ಕರ ಮಾಡಿದ್ದು ನಿಮ್ಮ ಬಿ.ಜೆ.ಪಿ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ?
✅ತಮ್ಮ ಬಿ.ಜೆ.ಪಿ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ವೇತನಕ್ಕಾಗಿ15 ದಿವಸಗಳ ಸುದೀರ್ಘ ಮುಷ್ಕರ ನಡೆದಿದ್ದು ಮರೆತು ಬಿಟ್ಟಿರಾ?
✅ ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು 3000 ನೌಕರರ ವಜಾ/… pic.twitter.com/s9qD43FsZX
— Ramalinga Reddy (@RLR_BTM) January 14, 2026
RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ IPL ಮ್ಯಾಚ್ ಆಯೋಜನೆ ಸಾಧ್ಯತೆ
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








