ಕಲಬುರ್ಗಿ: ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತಾ ಇದ್ದೀರಿ. ಹೀಗಾಗಿ ನನಗೂ ಹಣ ನೀಡುವಂತೆ ತಹಶೀಲ್ದಾರ್ ಒಬ್ಬರು ಸಿಬ್ಬಂದಿಗಳಿಗೆ ಅವಾಜ್ ಹಾಕಿದಂತ ಆಡಿಯೋ ಕಲಬುರ್ಗಿಯಲ್ಲಿ ವೈರಲ್ ಆಗಿದೆ.
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಮತ್ತು ಸಿಬ್ಬಂದಿಗಳ ನಡುವಿನ ಇಂತದ್ದೊಂದು ಆಡಿಯೋ ಈಗ ವೈರಲ್ ಆಗಿದೆ. ಕಲಬುರ್ಗಿಯ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಓಪನ್ ಸಭೆಯಲ್ಲೇ ಹಣಕ್ಕಾಗಿ ಸಿಬ್ಬಂದಿಗಳಿಗೆ ಬೇಡಿಕೆ ಇಟ್ಟಿರೋದು ಬಹಿರಂಗಗೊಂಡಿದೆ.
ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಓಪನ್ ಮೀಟಿಂಗ್ ನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಂತ ಆಡಿಯೋ ವೈರಲ್ ಆಗಿದೆ. ಜೊತೆಗೆ ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಸಿಬ್ಬಂದಿಗಳು ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಓಪನ್ ಮೀಟಿಂಗ್ ನಲ್ಲಿ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಸಾಹೇಬ್ರು ನನ್ನ ಹೆಸರಿನಲ್ಲಿ ನೀವು ಹಣ ಮಾಡುತ್ತೀರಿ. ನನಗೂ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಇದೇ ಕಾರಣದಿಂದ ಆರ್ ಐ ಒಬ್ಬರು ನನಗೆ ಅದರ ಜವಾಬ್ದಾರಿಯೇ ಬೇಡ, ಕಚೇರಿ ಕೆಲಸಕ್ಕೆ ಹಾಕಿ. ನನಗೆ ಹಣ ನೀಡಲು ಆಗೋದಿಲ್ಲ ಎಂಬುದಾಗಿಯೂ ಅಲವತ್ತು ಕೊಂಡಿದ್ದಾರೆ.
ಇತ್ತ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಸಾಹೇಬ್ರು ಮಾತ್ರ ನಾನು ಯಾವ ಸಿಬ್ಬಂದಿ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ನಾನು ವಿಎ ಒಬ್ಬರನ್ನು 6 ತಿಂಗಳ ಹಿಂದೆ ಅಮಾನತ್ತು ಮಾಡಿದ್ದೆ. ಆತನೇ ನನ್ನ ಬಗ್ಗೆ ಈ ರೀತಿಯ ಇಲ್ಲ ಸಲ್ಲದ ಆರೋಪ ಮಾಡಿ, ದೂರು ಕೊಟ್ಟಿದ್ದಾನೆ. ನಾನು ಹಣ ಕೇಳಿದ್ದರೆ ಎಲ್ಲಾ ಸಿಬ್ಬಂದಿ ಸೇರಿ ದೂರು ಕೊಡಬಹುದಾಗಿತ್ತು. ಈತ ಒಬ್ಬನೇ ದೂರು ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದಿನ ತಹಶೀಲ್ದಾರ್ ಅವರಿಗೂ ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ನನಗೂ ಸಹ ಈಗ ಹಾಗೆ ಮಾಡುತ್ತಿದ್ದಾರೆ. ನಾನು ಮಾತ್ರ ಆತನ ಬೆದರಿಕೆಗೆ ಹೆದರೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








