ವಿಜಯಪುರ: ಜಿಲ್ಲೆಯಲ್ಲಿ ಟ್ರ್ಯಾಕರ್, ಜಿಪಿಎಸ್ ಹೊಂದಿರುವಂತ ರಣಹದ್ದು ಪತ್ತೆಯಾಗಿ, ಆತಂಕವನ್ನು ಉಂಟು ಮಾಡಿದೆ. ಪತ್ತೆಯಾಗಿರುವಂತ ರಣಹದ್ದಿಗೆ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ವಸ್ತುಗಳನ್ನು ಅಳವಡಿಸಲಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಗೋಟ್ಯಾಳ ಗ್ರಾಮದ ತೋಟವೊಂದರಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ವಸ್ತುವನ್ನು ಅಳವಡಿಸಲಾಗಿದ್ದಂತ ರಹಣದ್ದೊಂದು ಪತ್ತೆಯಾಗಿದೆ.
ಇದಷ್ಟೇ ಅಲ್ಲದೇ ಪತ್ತೆಯಾದಂತ ರಣಹದ್ದಿನ ಕಾಲಿನಲ್ಲಿ ಗುರುತಿನ ಸಂಖ್ಯೆಯ ಟ್ಯಾಗ್ ಕೂಡ ಇರುವುದು ಕಂಡು ಬಂದಿದೆ. ರಣಹದ್ದು ಕಂಡಂತ ಸಾರ್ವಜನಿಕರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ರಣಹದ್ದು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!






